
ಅಜೆಕಾರು: ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರ್ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ, 14/ 17 ರ ವಯೋಮಿತಿಯ ಜಿಲ್ಲಾ ಮಟ್ಟದ ಬಾಲಕ- ಬಾಲಕಿಯರ ಥ್ರೋ-ಬಾಲ್ ಪಂದ್ಯಾಟದಲ್ಲಿ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನಿಯಾಗಿ ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.ಬಾಲಕಿಯರ ತಂಡ ದ್ವಿತಿಯ ಸ್ಥಾನ ಪಡೆದಿರುತ್ತದೆ .
ಜಯಶಾಲಿ ತಂಡಕ್ಕೆ ಚರ್ಚ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ವಂದನೀಯ ಗುರು ಹೆನ್ರಿ ಮಸ್ಕರೇನಸ್, ಮುಖ್ಯ ಶಿಕ್ಷಕಿ ಶ್ರೀಮತಿ ರೇಷ್ಮಾ ಶೀಲಾ ರೋಡ್ರಿಗಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಸುಶಾಂತ್, ತರಬೇತುದಾರರದ ಝುನೈದ್ ಹಾಗೂ ಹಳೆವಿದ್ಯಾರ್ಥಿ ಪ್ರಣೀತ್, ಪೋಷಕರಾದ ರಾಮಪ್ಪ, ಶ್ರೀಮತಿ ರೇಷ್ಮಾ, ನಾಜಿರ್ ಶಾಹ್ ಕ್ರೀಡಾಳು ಗಳೊಂದಿಗಿದ್ದು ಸಹಕರಿಸಿದ್ದು, ಶಿಕ್ಷಕ -ಶಿಕ್ಷಕೇತರ ವರ್ಗದವರು, ಪೋಷಕ ಪ್ರತಿನಿಧಿ ಹಾಗೂ ಪೋಷಕವರ್ಗದವರೆಲ್ಲರೂ ಶುಭ ಹಾರೈಸಿರುತ್ತಾರೆ.

