

ಬೆಂಗಳೂರು.ಸೆ 18: ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ ಹಾಗೂ ಡಿಜಿಟಲೀಕರಣಗೊಂಡ ಆಸ್ತಿ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸರ್ಕಾರದ ಮಹತ್ವಾಕಾಂಕ್ಷಿ ‘ಭೂ-ಗ್ಯಾರಂಟಿ’ ಯೋಜನೆಯ ಭಾಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಾದ್ಯಂತ ಸೆಪ್ಟೆಂಬರ್ 21 ರಿಂದ ‘ಇ-ಸ್ವತ್ತು ಅಭಿಯಾನ’ವನ್ನು ಅಧಿಕೃತವಾಗಿ ಹಮ್ಮಿಕೊಳ್ಳಲು ಆದೇಶಿಸಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ತೆರಿಗೆ ನಿರ್ಧರಣೆ ಪಟ್ಟಿಗಳಾದ ನಮೂನೆ-11(ಎ) ಹಾಗೂ ನಮೂನೆ-11(ಬಿ) ದಾಖಲೆಗಳನ್ನು ‘ಇ-ಸ್ವತ್ತು 2.0’ ತಂತ್ರಾಂಶದ ಮೂಲಕ ಅಭಿಯಾನದ ಮಾದರಿಯಲ್ಲಿ ವಿತರಿಸಲು ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಕೆ.ಹೆಚ್. ಅವರು ಸುತ್ತೋಲೆ ಹೊರಡಿಸಿದ್ದಾರೆ. ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬAಧಿಸಿದAತೆ ತಾವೇ ನೇರವಾಗಿ ಸಾರ್ವಜನಿಕ ಲಾಗಿನ್ ಮೂಲಕ ವಿವರ ಹಾಗೂ ಪೂರಕ ದಾಖಲೆಗಳನ್ನು ‘ಇ-ಸ್ವತ್ತು 2.0’ ತಂತ್ರಾAಶದಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಗತ್ಯ ದಾಖಲೆಗಳನ್ನು ಹೊಂದಿರುವ ಸಕ್ರಮ/ಕ್ರಮಬದ್ಧ ಆಸ್ತಿಗಳಿಗೆ ನಮೂನೆ-11(ಎ) ವಿತರಿಸಲಾಗುತ್ತದೆ. ನಿಯಮಾನುಸಾರ ಕ್ರಮಬದ್ಧವಲ್ಲದ, ಆದರೆ ತೆರಿಗೆ ವ್ಯಾಪ್ತಿಗೆ ಒಳಪಡುವ ಆಸ್ತಿಗಳಿಗೆ ನಮೂನೆ-11(ಬಿ) ದಾಖಲೆಯನ್ನು ನೀಡಲಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳ ನೆರವಿನೊಂದಿಗೆ ಗ್ರಾಮವಾರು ಹಾಗೂ ವಾರ್ಡ್ವಾರು ಅರ್ಹ ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಅಭಿಯಾನ ನಡೆಯುವ ಸ್ಥಳ, ದಿನಾಂಕ ಮತ್ತು ಸಮಯದ ವಿವರಗಳೊಂದಿಗೆ ಕಡ್ಡಾಯವಾಗಿ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯಾದ 7 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಿ, ನಂತರ ಪಂಚಾಯಿತಿ ಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಿ ‘ದಿಶಾಂಕ್’ ಆ್ಯಪ್ ಮೂಲಕ ಆಸ್ತಿಯ ಜಿಪಿಎಸ್, ಛಾಯಾಚಿತ್ರ ಹಾಗೂ ಅಳತೆಗಳನ್ನು ಕರಾರುವಾಕ್ಕಾಗಿ ಸೆರೆಹಿಡಿದು ಪರಿಶೀಲನೆ ನಡೆಸಲಿದ್ದಾರೆ. ಆಸ್ತಿಗಳನ್ನು ದಿಶಾಂಕ್ ಆ್ಯಪ್ ಮೂಲಕ ಖಾತರಿಪಡಿಸಿಕೊಳ್ಳುವುದು ಹಾಗೂ ಬಫರ್ ಪ್ರದೇಶದಲ್ಲಿದ್ದರೆ ನಿಯಮಾನುಸಾರ ಮೋಜಣಿ ಪ್ರಕ್ರಿಯೆ ನಡೆಸುವುದು ಕಡ್ಡಾಯವಾಗಿದೆ. ಅಪಾರ್ಟ್ಮೆಂಟ್ ಮತ್ತು ಬಡಾವಣೆ ಆಸ್ತಿಗಳಿಗೆ ಬಲ್ಕ್ ಅಪ್ಲೋಡಿಂಗ್ ಅವಕಾಶ ನೀಡಲಾಗಿದೆ.
ಈ ಅಭಿಯಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯನ್ನು ಹಾಗೂ ಪ್ರತಿ ತಾಲೂಕಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು. ತಾಲೂಕು ಇಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಗಳು ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
ಗ್ರಾಮಸ್ಥರು ತಮ್ಮ ಆಸ್ತಿಯ ಕ್ರಯಪತ್ರ, ಹಕ್ಕುಪತ್ರ, ಪಹಣಿ/ಆಧಾರ್ ಮುಂತಾದ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿಯಾಗುವ ದಿನಾಂಕದAದು ಅಭಿಯಾನದಲ್ಲಿ ಭಾಗವಹಿಸಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ನಿಗದಿತ ದಿನದಂದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ನಂತರದ ದಿನಗಳಲ್ಲಿ ಪಿಡಿಒ ಸಂಪರ್ಕಿಸಿ ದಾಖಲೆ ಪಡೆಯಲು ಅವಕಾಶವಿದೆ.





.
.
.
.
.
.
.
.
.
.
.
.
.
.
.
.
.
.
.
.
