

ಕಾರ್ಕಳ,ಅ.22: ರಾಷ್ಟ್ರೀಯ ಹೆದ್ದಾರಿ ಬದಿಯ ಜಮೀನು ಖರೀದಿಸಿ, ತಮ್ಮ ಜೀವನದ ಉಳಿತಾಯ ಹಾಗೂ ಬ್ಯಾಂಕ್ ಸಾಲದ ಹಣದಿಂದ ವಾಣಿಜ್ಯ ಕಟ್ಟಡ ನಿರ್ಮಿಸುವ ಕನಸು ಕಂಡಿರುವ ಅನೇಕ ಭೂಮಾಲೀಕರು ಇಂದು ಸಂಕಷ್ಟ ಎದುರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 75 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಗೆ ನಿರ್ಬಂಧ ವಿಧಿಸಿರುವ ಕ್ರಮದಿಂದ ಈಗಾಗಲೇ ಹೆದ್ದಾರಿ ಅಗಲೀಕರಣಕ್ಕಾಗಿ ಭೂಮಿ ಕಳೆದುಕೊಂಡವರೂ ಸೇರಿದಂತೆ ಅನೇಕರು ತಮ್ಮ ಉಳಿದ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ಭೂಮಾಲೀಕರಿಗೆ ನ್ಯಾಯ ಒದಗಿಸಿ ಎಂದು ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.
ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸುತ್ತೋಲೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯವರು ಜಿಲ್ಲೆಯ ಗ್ರಾಮ ಪಂಚಾಯತ್, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಜಮೀನುಗಳಿಗೆ ಸಂಬAಧಿಸಿದAತೆ 75 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಭೂ ಪರಿವರ್ತನೆ ಮಾಡದಂತೆ ಸೂಚಿಸಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಖರೀದಿಸಿದ ಜಮೀನನ್ನು ಉದ್ದೇಶಿತ ವಾಣಿಜ್ಯ ಬಳಕೆಗೆ ತರಲಾಗದ ಪರಿಸ್ಥಿತಿ ಎದುರಾಗಿದ್ದು, ಸ್ವಂತ ಉಳಿತಾಯ ಮತ್ತು ಬ್ಯಾಂಕ್ ಸಾಲದ ಬಂಡವಾಳ ಸಿಲುಕುವ ಆತಂಕವಿದೆ. ವಾಣಿಜ್ಯ ಕಟ್ಟಡ ನಿರ್ಮಾಣ ಸಾಧ್ಯವಾಗದೆ ಆರ್ಥಿಕ ನಷ್ಟವಾಗಿದ್ದು, ಬ್ಯಾಂಕ್ ಸಾಲದ ಕಂತು, ಬಡ್ಡಿ ಹಾಗೂ ಕುಟುಂಬದ ಆರ್ಥಿಕ ಭದ್ರತೆಯ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಮಾಡಿದ್ದು, ಅವರು ಈ ಗಂಭೀರ ಸಮಸ್ಯೆಯನ್ನು ಕೇಂದ್ರ ಸಾರಿಗೆ ಸಚಿವಾಲಯ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಭೂಮಾಲೀಕರಿಗೆ ನ್ಯಾಯ ದೊರಕಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
75 ಮೀಟರ್ ವಾಣಿಜ್ಯ ಭೂ ಪರಿವರ್ತನೆ ನಿರ್ಬಂಧದ ಕುರಿತು ಮರುಪರಿಶೀಲನೆ ನಡೆಸಬೇಕು. ಈ ಹಿಂದಿನAತೆ ಅನ್ವಯವಾಗುತ್ತಿದ್ದ 40 ಮೀಟರ್ ಮಿತಿಯ ನಂತರದ ಜಾಗದಲ್ಲಿ, ಕಾನೂನುಬದ್ಧ ನಿಯಮಗಳು, ರಸ್ತೆ ಸುರಕ್ಷತೆ ಮತ್ತು ಅಗತ್ಯ ಅನುಮತಿಗಳಿಗೆ ಒಳಪಟ್ಟು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು .ಈಗಾಗಲೇ ಜಮೀನು ಖರೀದಿಸಿ, ಬ್ಯಾಂಕ್ ಸಾಲ ಪಡೆದು ಹೂಡಿಕೆ ಮಾಡಿರುವ ಭೂಮಾಲೀಕರ ಹಿತಾಸಕ್ತಿಯನ್ನು ರಕ್ಷಿಸಲು ಸೂಕ್ತ ಪರಿಹಾರ ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಂಬAಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆಗೆ ಶೀಘ್ರ ಪರಿಹಾರ ಒದಗಿಸಬೇಕು . 75 ಮೀಟರ್ ನಿರ್ಬಂಧದ ಸಮಸ್ಯೆಯನ್ನು ಮರುಪರಿಶೀಲಿಸಿ, ಕಾನೂನುಬದ್ಧವಾಗಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನ್ಯಾಯಯುತ ಅವಕಾಶ ಕಲ್ಪಿಸಲು ಸರ್ಕಾರಗಳು ಮುಂದಾಗಲಿ ಎಮದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
