

ಬೆಂಗಳೂರು, ಆ.19: ನಮ್ಮನ್ನು ಜೈಲಿಗೆ ಹಾಕಿ ಅಥವಾ ಗಲ್ಲಿಗೆ ಹಾಕಿದರೂ ನಾವು ಮಾತ್ರ ವಂದೇ ಮಾತರಂ ನ 2 ಪ್ಯಾರಾ ಮಾತ್ರ ಹಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಕಾರ್ಯಕ್ರಮಗಳಲ್ಲಿಯೂ ನಾವು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ನಮ್ಮ ಪೂರ್ವಜನರು ಪಾಲಿಸಿಕೊಂಡು ಬಂದಿರುವುದನ್ನು ನಾವು ಮುಂದುವರೆಸುತ್ತೇವೆ. ಬಕಿಮಚಂದ್ರ ಚಟರ್ಜಿ ಬರೆದಿರುವ ಪೂರ್ಣ ಗೀತೆಯ ಕೇವಲ 2 ಪ್ಯಾರವನ್ನು ಮಾತ್ರ ನಾವು ಹಾಡುತ್ತೇವೆ,ಉಳಿದ ಪ್ಯಾರಗಳನ್ನು ಎಂದಿಗೂ ಹಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಬಿಜೆಪಿಯು ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆಯನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಚಿಹ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಪಮಾನ ಮಾಡಿದೆ ಎಂದು ಆರೋಪ ಮಾಡಿದರು. ಜತೆಗೆ ವಂದೇ ಮಾತರಂ ವಿವಾದ ಮುಂದಿಟ್ಟುಕೊAಡು ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಡೆಸುತ್ತಿದೆ.
ಕರ್ನಾಟಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಪೂರ್ಣ ಗೀತೆ ಹಾಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಕಾನೂನು ಪಾಲನೆ ಮಾಡಲಿ, ನಮ್ಮ ಆಕ್ಷೇಪವಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ 2 ಪ್ಯಾರಾ ಮಾತ್ರ ಹಾಡುತ್ತೇವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.





.
.
.
.
.
.
.
.
.
.
.
.
.
.
.
.
.
.
.
.
