
ಕಾರ್ಕಳ,ಡಿ.22: ಅಜೆಕಾರ್ ಪದ್ಮಗೋಪಾಲ್ ಎಜ್ ಯುಕೆ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾಪಕರ ದಿನದ ಪ್ರಯುಕ್ತ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.
ಡಿ.26 ರಂದು ಯಕ್ಷೇತ್ಕರ್ಷ ತಂಡದ ಸದಸ್ಯರಿಂದ ಸಂಜೆ 6 ಗಂಟೆಗೆ ಯಕ್ಷಗಾನ ನಡೆಯಲಿದೆ. ಡಿ. 27 ರಂದು ಸಂಜೆ ‘ಜ್ಞಾನ ತೀರ್ಥ ವಿಠಲ” ಸಂಗೀತ ಸಂಜೆ ನಡೆಯಲಿದೆ.
ಡಿ.28 ಅದಿತ್ಯವಾರ ಸಂಜೆ 5 ಗಂಟೆಗೆ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಶಾಸಕರಾದ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು,
ಮುಖ್ಯ ಅಭ್ಯಾಗತರಾಗಿ ಡಾ| ಶರತ್ ರಾವ್ ಪ್ರೊ ವೈಸ್ ಚಾನ್ಸಲರ್ ಮಾಹೆ, ಡಾ.ಜಿ.ರಾಮಕೃಷ್ಣ ಆಚಾರ್. ಚೇರ್ ಮನ್ ಎನ್.ಕೆ.ಎಫ್ ಮೂಡಬಿದ್ರೆ ಹಾಗೂ ಶ್ರೀ ಸಂಕೇತ್ ಜಿ.ಬಿ ಸಾಫ್ಟ್‌ವೇರ್ ಇಂಜಿನಿಯರ್ ಗೂಗಲ್ (ಐ.ಐ.ಟಿ ವಾರಣಾಸಿ ಹಾಗೂ ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ) ಇವರು ಭಾಗವಹಿಸಲಿದ್ದಾರೆ.
ನೀಟ್ ಮೂಲಕ ಎಂ.ಬಿ.ಬಿ.ಎಸ್ ಪ್ರವೇಶ ಪಡೆದ- 228 ವಿದ್ಯಾರ್ಥಿಗಳು, ಕೆಇಇ ಅಡ್ವಾನ್ಸ್‌ಡ್ ಮೂಲಕ ಐಐಟಿ ಪ್ರವೇಶ- ಓರ್ವ ಸಾಧಕ, ಜೆ.ಇ.ಇ ಮೈನ್ ಮೂಲಕ ಎನ್.ಐ.ಟಿ ಪ್ರವೇಶ- 9 ವಿದ್ಯಾರ್ಥಿಗಳು, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಪ್ರವೇಶ- ಇಬ್ಬರು ವಿದ್ಯಾರ್ಥಿಗಳು, ಕೆ.ಸಿ.ಇ.ಟಿ ಇಂಜಿನಿಯರಿಂಗ್ ನಲ್ಲಿ ಒಂದು ಸಾವಿರದ ಒಳಗಿನ ರ್ಯಾಂಕ್ ಪಡೆದ 41 ವಿದ್ಯಾರ್ಥಿಗಳು,ಸಿ.ಎ ಫೌಂಡೇಶನ್ – ಒಬ್ಬ ವಿದ್ಯಾರ್ಥಿನಿ, 2025ರಲ್ಲಿ ಸಿ.ಎ ಪರೀಕ್ಷೆ ತೇರ್ಗಡೆಯಾದ ಪೂರ್ವ ವಿದ್ಯಾರ್ಥಿಗಳು – 8 ವಿದ್ಯಾರ್ಥಿಗಳು,ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸಿದ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಳಗಾದ ಕ್ರೀಡಾ ಸಾಧಕರು 15 ವಿದ್ಯಾರ್ಥಿಗಳು ಹಾಗೂ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಓರ್ವ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನಡೆಯಲಿರುವುದು. ಅಲ್ಲದೆ ಸಂಸ್ಥೆಯಿಂದ ಎಂ.ಬಿ.ಬಿಎಸ್ ಪ್ರವೇಶ ಪಡೆದ 228 ವಿದ್ಯಾರ್ಥಿಗಳ ಪರವಾಗಿ ತಲಾ ಎರಡು ಸಾವಿರದಂತೆ ಭಾರತೀಯ ಸೇನೆಗೆ ಒಟ್ಟು ರೂ. 4 ಲಕ್ಷದ 56 ಸಾವಿರವನ್ನು ದೇಣಿಗೆಯಾಗಿ ನೀಡಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

.
.
