ಬೆಂಗಳೂರು: ಒಂದೆಡೆ ಬಿಸಿಲಿನ ಬೇಗೆ ಕರುನಾಡಿನ ಜನರನ್ನು ಸುಡುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆಯ ಬಿಸಿ ಅಕ್ಷರಶಃ ಜನ ಸಾಮಾನ್ಯರ ಮತ್ತು ಬಡವರ ಜೇಬು ಸುಡಲಿದೆ. ಯಾಕೆಂದರೆ ಇಂದಿನಿAದಲೇ ಹಾಲು, ಮೊಸರು, ವಿದ್ಯುತ್ ದರ, ಟೋಲ್, ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದ್ದು, ಜನ ಬೆಲೆಯೇರಿಕೆಯಿಂದ ಕಂಗಾಲಾಗಿದ್ದಾರೆ.
ಹಾಲು, ಮೊಸರಿನ ಬೆಲೆ ಲೀಟರ್ ಗೆ 4 ಏರಿಕೆಯಾದರೆ, ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳವಾಗಲಿದೆ ಮಾತ್ರವಲ್ಲದೇ ನಿಗದಿತ ಮಾಸಿಕ ಶುಲ್ಕ 120 ರಿಂದ 140ಕ್ಕೆ ಏರಿಕೆಯಾಗಲಿದೆ. ಉಕ್ಕು, ವಾಹನಗಳ ಬಿಡಿಭಾಗಳ ಆಮದು, ಉಕ್ಕಿನ ಆಮದು ದರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಸೆಸ್ ಹೆಚ್ಚಳದಿಂದ ಇಂದಿನಿAದ ಹೊಸ ವಾಹನ ಖರೀದಿ ದುಬಾರಿಯಾಗಲಿದೆ. ಇದರ ಜತೆಗೆ ಮುದ್ರಾಂಕ ಶುಲ್ಕ 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ ಆಗಲಿದ್ದು, ಅಫಿಡವಿಟ್ ಶುಲ್ಕ 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆ ಆಗುತ್ತಿದೆ. ಇನ್ನು ಹೆದ್ದಾರಿ ಪ್ರಾಧಿಕಾರ ಕೂಡ ಟೋಲ್ ದರವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಳ ಮಾಡುತ್ತಿದ್ದು, ಇಂದಿನಿAದಲೇ ಜಾರಿಗೆ ಬರುತ್ತಿದೆ. ರಾಜ್ಯದ ಒಟ್ಟು 66 ಟೋಲ್ ಪ್ಲಾಜಾಗಳಲ್ಲಿನ ದರ ಏರಿಕೆ ವಾಹನ ಸವಾರರಿಗೆ ಬಿಸಿ ತಟ್ಟಲಿದೆ. ಈ ಮಧ್ಯೆ ಇಂಧನ ಇಲಾಖೆಯ ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಲ್ ಇನ್ಸ್ಪೆಕ್ಟೋರೇಟ್ ಸಹ, ಮನೆಯ ಲಿಫ್ಟ್ ಪರಿಶೀಲನೆ ಮತ್ತು ರಿನಿವಲ್ ಹಾಗೂ ಟ್ರಾನ್ಸ್ಫಾರ್ಮರ್ ಪರಿಶೀಲನೆ ಮತ್ತು ರಿನಿವಲ್ ಮಾಡುವ ಶುಲ್ಕವನ್ನು ದುಪಟ್ಟು ಹೆಚ್ಚಿಸಲಾಗಿದೆ.
ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಕಡಿಮೆ ಆದಾಯ ಗಳಿಸುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ದುಸ್ತರವಾಗಲಿದೆ.
