ಹೆಬ್ರಿ: ಅನಂತಪದ್ಮನಾಭ ಫ್ರೆಂಡ್ಸ್ ವತಿಯಿಂದ ಹೆಬ್ರಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.11ರಿಂದ ಫೆ.14ರವರೆಗೆ ನಡೆಯುವ 15ನೇ ವರ್ಷದ ಹೆಬ್ಬೇರಿ ಉತ್ಸವ-2025ರ ಆಮಂತ್ರಣ ಪತ್ರಕೆ ಬಿಡುಗಡೆ ಕಾರ್ಯಕ್ರಮ ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಜ.19 ರಂದು ನಡೆಯಿತು.
ಧಾರ್ಮಿಕ ಮುಂದಾಳು ಸಮಾಜ ಸೇವಕ ಎಚ್. ಭಾಸ್ಕರ ಜೋಯಿಸ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವರ್ಷಂಪ್ರತಿ ಹೆಬ್ಬೇರಿ ಉತ್ಸವದ ಮೂಲಕ ಹೆಬ್ರಿ ಜಾತ್ರೆಯು ವಿಶೇಷ ಮೆರುಗು ಪಡೆಯುತ್ತದೆ. ಹೆಬ್ಬೇರಿ ಉತ್ಸವದ ಸಾಂಸ್ಕೃತಿಕ, ಕ್ರೀಡಾ ಮನೋರಂಜನಾ ಕಾರ್ಯಕ್ರಮದೊಂದಿಗೆ ಸಂಘಟನೆ, ಜನರ ಒಗ್ಗೂಡುವಿಕೆಯ ಮೂಲಕ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಕ್ಕೆ ಪೂರಕವಾಗಿ ಮುನ್ನಡೆಯುತ್ತಿರುವುದು ವಿಶೇಷ ಎಂದರು.
ಹೆಬ್ರಿ ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ ಸೇರಿಗಾರ ಅಧ್ಯಕ್ಷತೆ ವಹಿಸಿದ್ದು, ಹೆಬ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಹೇಶ್ ಟಿ.ಎಂ. ಬೇಳಂಜೆ ಹರೀಶ್ ಪೂಜಾರಿ, ಹೆಬ್ರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ, ಉದ್ಯಮಿ ನಾರಾಯಣ ಕೆ., ನಾರಾಯಣ ನಾಯ್ಕ್, ಶೇಖರ್ ಹೆಬ್ರಿ ಮುಂತಾದವರು ಉಪಸ್ಥಿತರಿದ್ದರು
