ಹೆಬ್ರಿ: ಹೆಬ್ರಿ ತಾಲೂಕಿನ ಬೇಳಂಜೆಯಲ್ಲಿ ಬೈಕಿಗೆ ಟ್ರಯಲ್ ಕ್ಯಾರಿಯಲ್ 14 ಚಕ್ರದ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೇಳಂಜೆಯ ತಮ್ಮಯ್ಯ ನಾಯ್ಕ್ ಗಾಯಗೊಂಡವರು. ಡಿ.23 ರಂದು ತಮ್ಮಯ್ಯ ಅವರು ತಮ್ಮ ಬೈಕಿನಲ್ಲಿ ಮನೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದಾಗ ಹೆಬ್ರಿ-ಹಾಲಾಡಿ ರಸ್ತೆಯಲ್ಲಿ ಹೆಬ್ರಿ ಕಡೆಯಿಂದ ಬಂದ ಟ್ರಯಲ್ ಕ್ಯಾರಿಯಲ್ 14 ಚಕ್ರದ ಲಾರಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದ ತಮ್ಮಯ್ಯ ಅವರ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.