ಹೆಬ್ರಿ : ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ವನಜಲ ರೆಸಿಡೆನ್ಸಿ ಕಟ್ಟಡದ ರೂಮ್ ನಂಬ್ರ 103 ನೇದರಲ್ಲಿ ಅಕ್ರಮವಾಗಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳ್ವೆ ಗ್ರಾಮದ ಹರೀಶ್ ಶೆಟ್ಟಿ (42), ಪ್ರಕಾಶ್ ಕುಮಾರ್ (45 ), ಮಂದಾರ (32), ಸಿದ್ದಾರ್ಥ ಶೆಟ್ಟಿ (41),ನಾಗರಾಜ್ ಶೆಟ್ಟಿ (36),ಮುಖೇಶ್ ನಾಯರ್ (46), ಚಿರಾಗ್ (32) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ 13,700/- ರೂ ನಗದು, 7 ಮೊಬೈಲ್ ಪೋನ್ ಗಳು, ಬಿಳಿ ಬಣ್ಣದ ಕ್ರೇಟಾ ಕಾರು, ಬಿಳಿ ಬಟ್ಟೆಯ ಮೇಲೆ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಹಾಗೂ ಬಿಳಿ ಬಣ್ಣದ ಬಟ್ಟೆಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.