ಹೆಬ್ರಿ: ಜಾಗದ ವಿಚಾರದಲ್ಲಿ ಸಂಬAಧಿಕರ ಮಧ್ಯೆ ತಕರಾರು ನಡೆದಿದ್ದು ಪತಿ ಮತ್ತು ಪತ್ನಿ ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಹೆಬ್ರಿ ತಾಲೂಕಿನ ಬೆಳಂಜೆಯಲ್ಲಿ ಜ.6 ರಂದು ನಡೆದಿದೆ.
ಬೆಳಂಜೆಯ ಸತೀಶ್ ಅವರು ಜ.6 ರಂದು ಸಂಜೆ ಕೆಲಸದಿಂದ ಮನೆಗೆ ಬರುತ್ತಿದ್ದಾಗ ಬೆಳಂಜೆ ಗ್ರಾಮದ ಹಣೆಗೂಡು ಎಂಬಲ್ಲಿರುವ ಸತೀಶ್ ಅವರ ಪಟ್ಟಾ ಜಾಗದ ಪಕ್ಕದಲ್ಲಿರುವ ಕುಮ್ಕಿ ಜಾಗದಲ್ಲಿ ಯಾರೋ ಜೆಸಿಬಿಯನ್ನು ಉಪಯೋಗಿಸಿ ಕೆಲಸ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ಸತೀಶ್ ಅಕ್ಕನ ಮಗ ಅರುಣ್ ಹಿಂದಿನಿAದ ಬಂದು ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಸತಿಶ್ ರ ತಲೆಗೆ ಮತ್ತು ಬೆನ್ನಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಸತೀಶ್ ರ ಅಕ್ಕ ಶಾರದಾ ಮತ್ತು ಅವರ ಗಂಡ ಶಿವರಾಮ ಎಂಬವರು ಸಹ ಸೇರಿಕೊಂಡು ಬೈದು ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಪತಿಗೆ ಹೊಡೆಯುತ್ತಿರುವುದನ್ನು ನೋಡಿದ ಸತೀಶ್ ಪತ್ನಿ ವೈಶಾಲಿ ಸ್ಥಳಕ್ಕೆ ಬಂದಾಗ ಅವರಿಗೆ ಕೂಡ ಹಲ್ಲೆ ನಡೆಸಿ, ಅರುಣ ಸತೀಶ್ ಮತ್ತವರ ಪತ್ನಿಯ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ ಎಂದು ಸತೀಶ್ ದೂರು ನೀಡಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.