ಬೀದರ್: ರಾಜ್ಯವೇ ಬೆಚ್ಚಿಬೀಳುವ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದ್ದು, ಗುರುವಾರ ಬೆಳ್ಳಂಬೆಳಗ್ಗೆ ದರೋಡೆಕೋರರು ಎಟಿಎಂಗಳಿಗೆ ಹಣ ತುಂಬುವ ವಾಹನ ಅಡ್ಡಗಟ್ಟಿ ಹಣ ತುಂಬುವ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ ಹಣದ ಟ್ರಂಕ್ ದೋಚಲು ಯತ್ನಿಸಿದಾಗ ಆತ ವಿರೋಧಿಸಿದಾಗ ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಗುಂಡಿನ ದಾಳಿಯಲ್ಲಿ ಸಿಬ್ಬಂದಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಗುಂಡಿನ ದಾಳಿಯಿಂದ ಸಿಬ್ಬಂದಿ ಗಿರಿ ವೆಂಕಟೇಶ್ ಎಂಬುವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ಬಳಿಕ ದುಷ್ಕರ್ಮಿಗಳು ಬೈಕಿನಲ್ಲಿ ಹಣದ ಎರಡು ಟ್ರಂಕ್ ಗಳನ್ನು ಹೊತ್ತೊಯ್ದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ