Share this news

ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ವರ್ಧಮಾನ ಸ್ವಾಮಿ ಬಸದಿಯ ಆಡಳಿತಗಾರರಾದ ಪ್ರವೀಣ್ ಕುಮಾರ್ ಅಗರಿ, ಸತೀಶ್ ಅಗರಿ ಮತ್ತು ನಿಧಿ ಮಿಥುನ್ ಅವರು ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದು, ಜೀರ್ಣೋದ್ಧಾರಕ್ಕೆ ಅಡ್ಡಿಪಡಿಸದಂತೆ ಕಾರ್ಕಳ ಸಿವಿಲ್‌ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಆದೇಶಿಸಿದೆ.

ಬಸದಿಯ ಅರ್ಚಕರಾದ ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಸೇರಿಕೊಂಡು ನಾವು ಬಸದಿಯ ಜೀರ್ಣೋದ್ಧಾರ ಮಾಡುತ್ತಿದ್ದು, ಜೀರ್ಣೋದ್ಧಾರಕ್ಕೆಂದು ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್’ಗಳನ್ನು ಅಳವಡಿಸಿ ಧನ ಸಂಗ್ರಹಿಸುತ್ತಿದ್ದರು. ಇವರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರವೀಣ್ ಕುಮಾರ್ ಅಗರಿ ಮತ್ತಿತರರು ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಅವರು ಬಸದಿಯ ನಿರ್ವಹಣೆ, ಆಡಳಿತ ಮತ್ತು ಜೀರ್ಣೋದ್ಧಾರ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದು ಅಥವಾ ಮಧ್ಯಪ್ರವೇಶಿಸುವುದನ್ನು ನಿರ್ಬಂಧಿಸಿ ತಡೆಯಾಜ್ಞೆ ನೀಡಿದೆ.ಮಾತ್ರವಲ್ಲದೇ ಬಸದಿಯ ಜೀರ್ಣೋದ್ಧಾರದ ಹೆಸರಿನಲ್ಲಿ ಯಾವುದೇ ಬ್ಯಾನರ್ ಅಥವಾ ಮಾಧ್ಯಮಗಳ ಮೂಲಕ ಪ್ರಕಟಿಸಿ ಆ ಮೂಲಕ ಧನ ಸಂಗ್ರಹಣೆ ಮಾಡುವುದನ್ನು ನಿರ್ಬಂಧಿಸಿ ನ್ಯಾಯಾಲಯವು ಆದೇಶಿಸಿದೆ.

                       in 

                          

                        

                       

Leave a Reply

Your email address will not be published. Required fields are marked *