Share this news

ಅಜೆಕಾರು: ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಇವರ ಆಶ್ರಯದಲ್ಲಿ ತಾಲೂಕು ಮರಾಠಿ ಸಮ್ಮಿಲನ ಕಡ್ತಲ ಸಿರಿಬೈಲು ದೇವಸ್ಥಾನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶೇಖರ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನ್ಯಾಯವಾದಿ ಸಂತೋಷ್ ಕುಮಾರ್ ಮಾತನಾಡಿ, ಕಾರ್ಕಳ ಮರಾಠಿ ಸಮಾಜ ಸೇವಾ ಸಂಘವು ಸಾಂಸ್ಕೃತಿಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ವೈದ್ಯಕೀಯ ನೆರವು,ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸಾಧಕ ಪ್ರಶಸ್ತಿ, ತಾಲೂಕಿನ ಗದ್ದಿಗೆ ಹಾಗೂ ಕೂಡುವಳಿಕೆಯ ಯಜಮಾನರಿಗೆ ಗೌರವದ ಸತ್ಕಾರ ಮುಂತಾದ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶಿವಾಜಿಯ ಆದರ್ಶ, ಅಂಬೇಡ್ಕರ್ ರ ದೂರದರ್ಶಿತ್ವ, ಗುರು ಹಿರಿಯರ ಪ್ರಾಮಾಣಿಕತೆ, ನಿಷ್ಠೆ, ಧಾರ್ಮಿಕ ಆಚರಣೆಗಳು ಹಾಗೂ ಪರಂಪರೆಯಿAದ ಬಂದ ಸಂಸ್ಕೃತಿ ಸಂಸ್ಕಾರದಿAದ ಮರಾಠಿ ಸಮಾಜವು ವಿಶೇಷ ಸ್ಥಾನಮಾನವನ್ನು ಹೊಂದಿದೆ. ಇದನ್ನು ಉಳಿಸಿ ಬೆಳೆಸಿಕೊಂಡು, ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡೋಣ, ಎಲ್ಲರೂ ಒಗ್ಗಟ್ಟಾಗಿ ಬೆಳೆಯೋಣ ಎಂದು ಹೇಳಿದರು.

ಮುಖ್ಯ ಅತಿಥಿ ಚಂದ್ರ ನಾಯ್ಕ್ ಕೋಟೇಶ್ವರ ಮಾತನಾಡಿ, ಉಳ್ಳವರು ಇಲ್ಲದವರಿಗೆ ಹಂಚಿಕೊAಡು, ಕಷ್ಟದಲ್ಲಿದ್ದವರಿಗೆ ಊರುಗೋಲಾಗಿ, ಕಡು ಬಡವರಿಗೆ ಆಶ್ರಯದಾತರಾಗಿ ನಾವು ಈ ಸಮಾಜದಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ವಿ.ಪಿ ನಾಯ್ಕ್ ಮಂಗಳೂರು ಅವರು ಮಾತನಾಡಿ, ನಮ್ಮ ಮಕ್ಕಳ ಕಡೆಗೆ ಹೆಚ್ಚು ಗಮನವನ್ನು ಕೊಟ್ಟು ಅವರಿಗೆ ಒಳ್ಳೆಯ ವಿದ್ಯಾಭ್ಯಾಸ, ಜ್ಞಾನ ಹಾಗೂ ಒಳ್ಳೆಯ ವಿಚಾರಗಳನ್ನು ತಿಳಿಸುವ ಮುಖಾಂತರ ಸಮಾಜದ ಆಸ್ತಿಯನ್ನಾಗಿ ಮಾಡೋಣ ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಶಂಕರ್ ನಾಯ್ಕ್, ಉಪಾಧ್ಯಕ್ಷರಾದ ಸುಗಂಧಿ ನಾಯ್ಕ್,ಸುಧಾಕರ ನಾಯ್ಕ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲ ಹಿರ್ಗಾನ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಎಂಟು ಮಂದಿ ಸಾಧಕರಿಗೆ ಸಾಧಕ ಪ್ರಶಸ್ತಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಂಘದ ವಾರ್ಷಿಕ ಮಹಾಸಭೆ,ನಮ್ಮ ಭಾಷೆ ಮತ್ತು ಸಂಸ್ಕೃತಿ ವಿಚಾರವಾಗಿ ಹೋಳಿ ಹಬ್ಬದ ಪದ, ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಸಮಾಜದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಿತೇಶ್ ಕುಮಾರ್ ಬಳಗದವರಿಂದ ಭಕ್ತಿಗಾನ ಸೌರಭ ನಡೆಯಿತು.

ಕೋಶಾಧಿಕಾರಿ ಶ್ರೀನಿವಾಸ ನಕ್ರೆ ಲೆಕ್ಕಪತ್ರ ಮಂಡಿಸಿದರು. ಯುವ ಘಟಕದ ಅಧ್ಯಕ್ಷ ನಾಗೇಂದ್ರ ಹೆಬ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಇರ್ವತ್ತೂರು ವಾರ್ಷಿಕ ವರದಿ ವಾಚನ ಮತ್ತು ಧನ್ಯವಾದ ಸಲ್ಲಿಸಿದರು, ಶಿಕ್ಷಕಿ ನಿವೇದಿತಾ ಎಡಪದವು ಕಾರ್ಯಕ್ರಮ ನಿರೂಪಿಸಿದರು.

                       in 

                          

                        

                       

Leave a Reply

Your email address will not be published. Required fields are marked *