
ಕಾರ್ಕಳ,ಮೇ.31: ಕರಾವಳಿಯ ಪ್ರತಿಭೆಗಳ ಅಪೂರ್ವ ಸಂಗಮದಲ್ಲಿ ಮೂಡಿಬಂದಿರುವ, ಬಹುನಿರೀಕ್ಷಿತ ತುಳು ಕಿರುಚಿತ್ರ ‘ಪರಕೆ’ ಇಂದು ‘ಮುಖಪುಟ’ ಯೂಟ್ಯೂಬ್ ಚಾನೆಲ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.
ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಕಿರುಚಿತ್ರಕ್ಕೆ ಯುವ ಪ್ರತಿಭೆ ಅಭಿ ಬಜಗೋಳಿ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರತಿ ಸನ್ನಿವೇಶಕ್ಕೂ ಪೂರಕವಾಗಿ ಡಿಜೆ RGH ಅವರು ಅದ್ಭುತವಾಗಿ ಸಂಗೀತ ಸಂಯೋಜನೆ ನೀಡಿದ್ದಾರೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿರುವ ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ಬಜಗೋಳಿಯ ಎಕ್ವಿನಾಕ್ಸ್ ಕ್ರಿಯೇಟರ್ಸ್ ಸ್ಟುಡಿಯೋ (Equinox Creators Studio) ನಿಭಾಯಿಸಿದೆ.
ಕರಾವಳಿಯ ಹೆಸರಾಂತ ಕಲಾವಿದ ಕಿರಣ್ ನೆಲ್ಲಿಗುಡ್ಡೆ ಅವರು ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ವಿಶಿಷ್ಟ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತು ಕೀರ್ತನ್ ಸಾಲಿಯಾನ್, ಅಶು ಬಜಗೋಳಿ, ಕಿಶನ್ ಸಾಲಿಯಾನ್ ಹಾಗೂ ಉಮೇಶ್ ಸಾಲಿಯಾನ್ ಅವರು ಸಹಕಾರ ನೀಡಿದ್ದಾರೆ.
ದೃಶ್ಯ ವೈಭವ ಹಾಗೂ ಅತ್ಯುತ್ತಮ ಕಥಾಹಂದರವನ್ನು ಹೊಂದಿರುವ ‘ಪರಕೆ’ ತುಳು ಕಿರುಚಿತ್ರವು ಪ್ರೇಕ್ಷಕರ ಮನಗೆಲ್ಲುವ ಭರವಸೆ ಹೊಂದಿದ್ದು, ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಕರಾವಳಿಯ ಕಲಾಭಿಮಾನಿಗಳು ವೀಕ್ಷಿಸಿ, ಪ್ರೋತ್ಸಾಹಿಸಬೇಕಾಗಿ ಚಿತ್ರತಂಡ ಈ ಮೂಲಕ ವಿನಂತಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
