ಕಾರ್ಕಳ: ಸಾರ್ವಜನಿಕರ ಅಹವಾಲು ಸ್ವೀಕಾರ, ಸರಕಾರದ ವಿವಿಧ ಸವಲತ್ತು ವಿತರಣೆ, ಮುಡಾರು ಗ್ರಾಮ ಪಂಚಾಯತ್ ನ ಸ್ವಂತ ಅನುದಾನದಲ್ಲಿ ಸಹಾಯಧನ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮವು ಮುಡಾರು ಪಂಚಾಯತ್ ನ ಡಾ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಶಾಸಕರಾದ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನೆರವೇರಿತು.
ಗ್ರಾಮ ಪಂಚಾಯತ್ ನ ಸ್ವಂತ ಅನುದಾನದ ಶೇ.25 ನಿಧಿಯಲ್ಲಿ ವೈದ್ಯಕೀಯ ಸಹಾಯಧನ, ಶೈಕ್ಷಣಿಕ ಸಹಾಯಧನ, ಸ್ಕೂಲ್ ಮಕ್ಕಳಿಗೆ ಅತ್ಯುನ್ನತ ಗುಣಮಟ್ಟದ ಸ್ಕೂಲ್ ಬ್ಯಾಗ್, ಶೇ.5 ನಿಧಿಯಲ್ಲಿ ವೈದ್ಯಕೀಯ ಸಹಾಯಧನ, ಶೇ.2 ನಿಧಿಯಲ್ಲಿ ಗ್ರಾಮದ ವ್ಯಾಪ್ತಿಯ ಎಲ್ಲಾ ಶಾಲೆಯ ಮತ್ತು ಅಂಗನವಾಡಿ ಮಕ್ಕಳಿಗೆ
ಕ್ರೀಡಾ ಸಾಮಾಗ್ರಿ ವಿತರಿಸಲಾಯಿತು.
ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಿಟ್, ಕೇಂದ್ರ ಸರಕಾರದ ವಿಶೇಷ ಯೋಜನೆಯಡಿ ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆ ವಿತರಿಸಲಾಯಿತು.
33 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಘೋಷಿಸಿದ ರಾಷ್ಟ್ರ ಪ್ರಶಸ್ತಿ ವಿಜೇತೆ ಕಾರ್ಯಕರ್ತೆ ಪದ್ಮಾವತಿ ಅಮೀನ್ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಅವ್ನಿ ಪಿ ಜೈನ್ ರವರನ್ನು ಸನ್ಮಾನಿಸಲಾಯಿತು.
ಪಂಚಾಯತ್ ಪಂಚಾಯತ್ ಅಧ್ಯಕ್ಷರಾದ ಶೃತಿ ಡಿ ಅತಿಕಾರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶೀಲ್ದಾರ್ ಪ್ರದೀಪ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶಶಿಧರ ಕೆ ಜಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ವಿಜಯ, ನಲ್ಲೂರು ಪಂಚಾಯತ್ ಅಧ್ಯಕ್ಷರಾದ ಅಶೋಕ್ ಪೂಜಾರಿ, ಮಾಳ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ, ಈದು ಪಂಚಾಯತ್ ಅಧ್ಯಕ್ಷರಾದ ಸದಾನಂದ ಪೂಜಾರಿ, ಮಿಯಾರು ಪಂಚಾಯತ್ ಅಧ್ಯಕ್ಷರಾದ ಸನ್ಮತಿ ನಾಯಕ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಮುಡಾರು ಪಂಚಾಯತ್ ನ ಪಿ.ಡಿ.ಓ ರಮೇಶ್ ಎಸ್ ಕಾರ್ಯಕ್ರಮ ನಿರ್ವಹಿಸಿದರು.