ಕಾರ್ಕಳ: ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ನಲ್ಲಿ ಹೆಸರಾಗಿರುವ ಜಾನ್ಸ್ ಹೈಟೆಕ್ ಅಗ್ರಿ ಸೊಲ್ಯೂಷನ್ಸ್ ಸಂಸ್ಥೆಯ ನೂತನ ಮಳಿಗೆ ನಾಳೆ (ನ.4 ರಂದು ಸೋಮವಾರ) ಬೆಳಗ್ಗೆ 10 ಗಂಟೆಗೆ ಕಾರ್ಕಳದಲ್ಲಿ ಉದ್ಘಾಟನೆಯಾಗಲಿದೆ.
ಈಗಾಗಲೇ ಮೂಡಬಿದಿರೆ,ಸಿದ್ದಕಟ್ಟೆ ಹಾಗೂ ಬಿಸಿರೋಡುಗಳಲ್ಲಿ ಶಾಖೆಗಳನ್ನು ಹೊಂದಿರುವ ಜಾನ್ಸ್ ಹೈಟೆಕ್ ಅಗ್ರಿ ಸೊಲ್ಯುಷನ್ಸ್ ಇದೀಗ ತನ್ನ 4ನೇ ಶಾಖೆಯನ್ನು ಕಾರ್ಕಳದ KMES ಶಾಲೆಯ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ತೆರೆಯುತ್ತಿದೆ.

ರೈತರು ಹಾಗೂ ಕೃಷಿಕರ ಬಳಕೆಗೆ ತಕ್ಕಂತೆ ಗುಣಮಟ್ಟದ ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ನಲ್ಲಿ ಮುಂಚೂಣಿಯಲ್ಲಿದೆ. ಬ್ರಾಂಡೆಡ್ ಕಂಪೆನಿಯ ಯಂತ್ರೋಪಕರಣಗಳನ್ನು ವಿಶೇಷ ರಿಯಾಯಿತಿ ಜತೆಗೆ ಸರ್ಕಾರದ ಸಬ್ಸಿಡಿ ಬೆಲೆಯಲ್ಲಿ ರೈತರಿಗೆ ಒದಗಿಸಲಾಗುತ್ತದೆ.
ಪವರ್ ಸ್ಪ್ರೇಯರ್, ಪೋರ್ಟಬಲ್ ಬ್ಯಾಟರಿ ಪಂಪ್, ಚಾಪ್ ಕಟ್ಟರ್, ಬ್ರಶ್ ಕಟ್ಟರ್,ಮರ ಕಟ್ಟಿಂಗ್ ಯಂತ್ರ, ಜನರೇಟರ್ ,ಗುಂಡಿ ತೆಗೆಯುವ ಯಂತ್ರ, ವಿವಿಧ ರೀತಿಯ ಏಣಿಗಳು, ವಾಹನ ತೊಳೆಯುವ ಯಂತ್ರಗಳು ಸೇರಿದಂತೆ ಎಲ್ಲಾ ರೀತಿಯ ಕೃಷಿ ಉಪಕರಣಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9845981008 ಸಂಪರ್ಕಿಸಬಹುದಾಗಿದೆ.
































































































