Share this news

 

 

 

 

ಕಾರ್ಕಳ, ಮಾ.28: ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿರುವ ಪ್ರಕರಣ ಕಾರ್ಕಳದ ಅಂಚಿಕಟ್ಟೆ ಹೋಂಡಾ ಶೋರೂಂ ಬಳಿ ಶುಕ್ರವಾರ ನಡೆದಿದೆ.

ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರು ಹಂಚಿಕಟ್ಟೆ ಹೋಂಡಾ ಶೋರೂಮ್ ಬಳಿ ಬಂಗ್ಲೆಗುಡ್ಡೆ ಸರ್ಕಲ್‌ ಕಡೆಯಿಂದ ಅತಿವೇಗವಾಗಿ ಬಂದ ಫಾರ್ಚುನರ್ ಕಾರನ್ನು ನಿಲ್ಲಿಸುವಂತೆ ಸೂಚಿಸಿದಾಗ ಕಾರಿನಲ್ಲಿದ್ದ ಆರೋಪಿಗಳಾದ ಸುದರ್ಶನ್, ಕರ್ತವ್ಯ ಶೆಟ್ಟಿ, ಅರುಣ್, ಶ್ರೀಕಾಂತ್ ಮತ್ತು ಶಶಿಕಾಂತ್ ಎಂಬವರು ಕಾರನ್ನು ಪೊಲೀಸರ ಮೇಲೆ ಹತ್ತಿಸಿ ಕೊಲೆಗೆ ಯತ್ನಿಸಿ ಕಾರು ನಿಲ್ಲಿಸದೇ ಪರಾರಿಯಾಗಿದ್ದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಎಲ್ಲಾ ಕಡೆ ನಾಕಾಬಂದಿ ಹಾಕಿ ಕೊನೆಗೂ ಶಿರ್ವದಲ್ಲಿ ಕಾರನ್ನು ತಡೆದು ಆರೋಪಗಳನ್ನು ಹೆಡೆಮುರಿಕಟ್ಟಿದ್ದಾರೆ.

ಬಯಲಾಯಿತು IPL ಬೆಟ್ಟಿಂಗ್ ದಂಧೆಯ ಜಾಲ:

ಕಾರು ಹರಿಸಿ ಪೊಲೀಸರನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪಿಗಳು ದೂರದ ಬಿಹಾರದಲ್ಲಿ ಕುಳಿತುಕೊಂಡು IPL ಕ್ರಿಕೆಟ್ ಬೆಟ್ಟಿಂಗ್ ಜಾಲ ಆರಂಭಿಸಲು ಮುಂದಾಗಿದ್ದರು ಎಂಬ ಸ್ಪೋಟಕ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಹೆಬ್ರಿಯ ತೇಜಸ್ ಶೆಟ್ಟಿ ಎಂಬಾತ ಈ ಬೆಟ್ಟಿಂಗ್ ಜಾಲದ ಕಿಂಗ್’ಪಿನ್ ಆಗಿದ್ದಾನೆ ಎಂಬ ಮಾಹಿತಿ ಲಭಿಸಿದ್ದು ಈತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *