

.
.
.
.

ಕಾರ್ಕಳ,ಫೆ.04: ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಆಯೋಜನೆಯಲ್ಲಿ, ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ NSUI ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ನೇತೃತ್ವದಲ್ಲಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ – 2026 ಕಾರ್ಯಕ್ರಮವು ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.ಉಡುಪಿ ,ಮಂಗಳೂರು ಹಾಗೂ ಕಾರ್ಕಳ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಆಗಮಿಸಿದ ಯುವ ಕ್ರಿಕೆಟ್ ತಂಡಗಳು ಕ್ರೀಡಾಸ್ಫೂರ್ತಿ, ಶಿಸ್ತು ,ಸಹೋದರತ್ವ ಮತ್ತು ಸ್ನೇಹಭಾವದೊಂದಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಂಡರು.
ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ – 2026ರ ಅಂತಿಮ ಪಂದ್ಯದಲ್ಲಿ ಮಹಾಲಿಂಗೇಶ್ವರ ಕಾರ್ಕಳ ತಂಡವು ವಿಜೇತರಾಗಿ ಹೊರಹೊಮ್ಮಿತು.ಮಂಗಳೂರು ಮೂಲದ ಗೋರಿ ಯಂಗ್ ಬಾಯ್ಸ್ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು.
ಈ ಪಂದ್ಯಾಟದಲ್ಲಿ ಆಯ್ದ ಹಿರಿಯ ಕಾಂಗ್ರೆಸ್ಸಿಗರನ್ನು , ಯುವ ಕ್ರೀಡಾ ಪಟುಗಳನ್ನು, ಕಾರ್ಕಳದ ಅತ್ಯಂತ ಹಿರಿಯ ಕ್ರಿಕೆಟ್ ತಂಡದ ಸ್ಥಾಪಕರು ಮತ್ತು ಕಪ್ತಾನರನ್ನು ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಪಿನ್ ಚಂದ್ರಪಾಲ್,
ಮಾಜಿ ಪುರಸಭಾ ಅಧ್ಯಕ್ಷ ಸೀತಾರಾಮ, ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷ ಅವಿನಾಶ್ ಶೆಟ್ಟಿ, 1ನೇ ಏಷ್ಯನ್ ಓಪನ್ ಅಂತಾರಾಷ್ಟ್ರೀಯ ಮುಕ್ತ ಟೇಕ್‌ವಾಂಡೋ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತ ಪವನ್, ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟು ನೋಅ ಜೋ ಪಾಯಿಸ್ ರನ್ನು ಗೌರವಿಸಿ ಅಭಿನಂದಿಸಲಾಯಿತು.
ಪಂದ್ಯಾಟದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಆಯೋಜಕರು ಅಭಿನಂದನೆ ಸಲ್ಲಿಸಿದ್ದಾರೆ.

.
.
.
.