

ಕಾರ್ಕಳ, ಆ.20: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ (ರಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕಾರ್ಕಳದ ಹಿರಿಯಂಗಡಿ ಒಕ್ಕೂಟದ ಸುಗಂಧಿ, ಜನನಿ, ಬಸವಲಿಂಗೇಶ್ವರ, ಸಂಪಿಗೆ, ಚೈತನ್ಯ ಸಂಘಗಳನ್ನು ಸೇರಿಸಿ” ಅಮ್ಮ” ಜ್ಞಾನ ವಿಕಾಸ ಕೇಂದ್ರವು ರಾಮಪ್ಪ ಅನುದಾನಿತ ಶಾಲೆಯ ಶಿಶುಮಂದಿರದಲ್ಲಿ ಉದ್ಘಾಟಿಸಲಾಯಿತು.
ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್ ಅವರು ಅಮ್ಮ ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಇದ ಅವರು, ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸುವುದರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 30 ವರ್ಷಗಳಿಂದ ಮಹಿಳೆಯರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಅದರಲ್ಲಿ ವಿಶೇಷವಾಗಿ ಮಹಿಳಾಜ್ಞಾನ ವಿಕಾಸ ಕಾರ್ಯಕ್ರಮ ಪ್ರತಿನಿತ್ಯ ಮಹಿಳೆ ತನ್ನ ಕುಟುಂಬಕ್ಕಾಗಿ ಯೋಚಿಸುತ್ತಿದ್ದರೆ ಆ ಕುಟುಂಬವನ್ನು ನಿರ್ವಹಿಸುವ ಮಹಿಳೆಯ ಬಗ್ಗೆ ಪ್ರತಿನಿತ್ಯ ಯೋಚನೆ ಮಾಡುತ್ತಿರುವವರು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು. ಅವರ ಕಲ್ಪನೆಯ “ಅಮ್ಮ” ಎನ್ನುವ ಜ್ಞಾನವಿಕಾಸ ಕೇಂದ್ರ ಈ ದಿನ ಉದ್ಘಾಟನೆಗೊಳ್ಳುತ್ತಿರುವುದು ಶ್ಲಾಘನೀಯ ಹಾಗೂ ಈ ಕಾರ್ಯಕ್ರಮದಲ್ಲಿ ಬರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ತಮ್ಮೊಳಗಿರುವ ಕೌಶಲ್ಯಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆ ಇದರ ಸದುಪಯೋಗವನ್ನು ಪಡೆದುಕೊಂಡು ಪ್ರತಿಯೊಬ್ಬ ಮಹಿಳೆಯು ತನ್ನ ಕುಟುಂಬಕ್ಕೆ ಉತ್ತಮ ವಿಚಾರಗಳನ್ನು ಹಂಚುವAತೆ ಆಗಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ, ಹೊಸ ಜ್ಞಾನ ವಿಕಾಸ ಕೇಂದ್ರಕ್ಕೆ ದಾಖಲಾತಿ ಹಸ್ತಾಂತರಿಸಿ ಮಾತನಾಡಿ, ಮಾತೃಶ್ರೀ ಹೇಮಾವತಿ ಅಮ್ಮನವರ ಪರಿಕಲ್ಪನೆಯಲ್ಲಿ ಮೂಡಿದ ಜ್ಞಾನ ವಿಕಾಸ ಕಾರ್ಯಕ್ರಮ ಮಹಿಳೆಯರಿಗಾಗಿ ಸೀಮಿತವಾಗಿರುವ ಕಾರ್ಯಕ್ರಮವಾಗಿದ್ದರು ಮಹಿಳೆಯರಿಂದ ಕುಟುಂಬಕ್ಕೆ ಮಾರ್ಗದರ್ಶನವನ್ನು ನೀಡುವ ಕಾರ್ಯಕ್ರಮವಾಗಿದೆ ಕಾರ್ಕಳದ ಹೃದಯ ಭಾಗದಲ್ಲಿ ಅಮ್ಮ ಅನ್ನುವ ಜ್ಞಾನವಿಕಾಸ ಕೇಂದ್ರ ಉದ್ಘಾಟನೆಗೊಂಡು ಮುಂದಿನ ದಿನಗಳಲ್ಲಿ ತಾಲೂಕು ಜಿಲ್ಲೆ, ರಾಜ್ಯದಲ್ಲಿ ಗುರುತಿಸುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯಂಗಡಿ ಒಕ್ಕೂಟ ಅಧ್ಯಕ್ಷೆ ಅರುಣಾ ಮಾತನಾಡಿ ನಮ್ಮ ಒಕ್ಕೂಟಕ್ಕೆ ಒಂದು ಉತ್ತಮ ಕಾರ್ಯಕ್ರಮ ಕೊಡುಗೆಯಾಗಿ ಸಿಕ್ಕಿರುವುದು ನಮ್ಮ ಅದೃಷ್ಟ ಮುಂದಿನ ದಿನಗಳಲ್ಲಿ ಹೆಚ್ಚು ಕೌಶಲ್ಯಗಳನ್ನು ಹಾಗೂ ಜ್ಞಾನವಿಕಾಸದ ಕಾರ್ಯಕ್ರಮ ದಡಿಯಲ್ಲಿ ಸಿಗುವ ತರಬೇತಿಗಳನ್ನು ಪಡೆದುಕೊಂಡು ನಮ್ಮ ಒಕ್ಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಿ ಶುಭ ಹಾರೈಸಿದರು.
ವಲಯ ಮೇಲ್ವಿಚಾರಕರಾದ ಸುಶೀಲ ಸ್ವಾಗತಿಸಿ ಹಿರಿಯಂಗಡಿ ಸೇವಾ ಪ್ರತಿನಿಧಿಯಾದ ಶೋಭಾ ರಾವ್ ವಂದಿಸಿದರು. ಕಾರ್ಕಳ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
