ಕಾರ್ಕಳ: ಕಾರ್ಕಳ ಕಸಬಾ ಗ್ರಾಮದ ಗಾಂಧಿ ಮೈದಾನ ಬಳಿ ಗಂಜಾ ಸೇವನೆ ಮಾಡುತ್ತಿದ್ದ ವಕ್ತಿಯನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜ.9 ಗುರುವಾರ ಗಾಂಜಾವನ್ನು ಪೇಪರ್‌ನಲ್ಲಿ ಸುತ್ತಿ ಸಿಗರೇಟು ರೀತಿಯಲ್ಲಿ ಸೇದುತ್ತಿದ್ದ ಝೀಶಾನ್ (26) ಎಂಬಾತನನ್ನು ವಶಕ್ಕೆ ಪಡೆದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಖಚಿತವಾಗಿದೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.