Share this news

ಕಾರ್ಕಳ, ಫೆ.04: ಪ್ರೀತಿಯ ವಿಚಾರ ಬಚ್ಚಿಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿ ಮೋಸ ಮಾಡಿರುವುದಲ್ಲದೆ ಪರಿಹಾರದ ಹಣ ನೀಡದೆ ವಂಚನೆ ಎಸಗಿರುವ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದಾರೆ.

ಪುತ್ತೂರು ಗ್ರಾಮದ ಆರ್ಯಾಪು ನಿವಾಸಿ ವಸಂತ ಬಿ ಅವರು ಈದು ಗ್ರಾಮದ ಅಲಿಮಾರು ಗುಡ್ಡೆಯ ಎ.ಸಿ ಶರ್ಮಿಳ ಅವರನ್ನು 2025 ರ ಅಕ್ಟೋಬರ್ 29 ರಂದು ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದು ವಾರದಲ್ಲಿ ಪತಿ ಬೇರೊಬ್ಬಳನ್ನು ಪ್ರೀತಿಸುವ ವಿಚಾರ ತಿಳಿದು ಶರ್ಮಿಳ ಪತಿಯನ್ನು ತೊರೆದಿದ್ದರು.
ತಾನು ಪ್ರೀತಿಸುವ ವಿಚಾರ ಬಚ್ಚಿಟ್ಟು ವಂಚನೆ ಮಾಡಿದ್ದ ವಸಂತ ಪತ್ನಿಗೆ 6 ಲಕ್ಷ ರೂ.ಪರಿಹಾರ ಕೊಡುವುದಾಗಿ ತಿಳಿಸಿದ್ದು, ಈವರೆಗೂ ಹಣ ನೀಡದೆ ವಂಚನೆ ಎಸಗಿದ್ದಾರೆ. ಅಲ್ಲದೇ ಪತಿಯ ತಾಯಿ ವಿಮಲ, ಅಣ್ಣ ರಘು, ಅವರ ಪತ್ನಿ ವಿನೋದ, ಸಹೋದರಿಯರಾದ ಪೂರ್ಣಿಮ, ಅಶ್ವಿನಿ ಹಾಗೂ ಭಾವಂದಿರಾದ ಅಶೋಕ್ ಮತ್ತು ಸುರೇಶ್ ಇವರೆಲ್ಲರಿಗೂ ವಸಂತ ಅವರ ಪ್ರೀತಿಯ ವಿಚಾರ ತಿಳಿದಿದ್ದರೂ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿ ಶರ್ಮಿಳ ದೂರು ನೀಡಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *