

ಕಾರ್ಕಳ: ಕಾರ್ಕಳ ತಾಲೂಕು ನೂರಾಳ್‌ಬೆಟ್ಟು ಗ್ರಾಮದ ಮುಳ್ಳಿಕಾರು ಪಂಜಿಲ ಮನೆ ನಿವಾಸಿಯೊಬ್ಬರು ಮಾಳ ಚೌಕಿಯ ಹಾಡಿಯೊಂದರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನೂರಾಳ್‌ಬೆಟ್ಟು ನಿವಾಸಿ ಪ್ರಶಾಂತ್(37ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ಅವರು ಜೂ.23 ರಂದು ಬೆಳಗ್ಗೆ ಎಂದಿನAತೆ ಕೆಲಸಕ್ಕೆ ಹೋಗಿದ್ದರು. ಆದರೆ ಮಧ್ಯಾಹ್ನ ತನ್ನ ದೊಡ್ಡಪ್ಪನ ಮಗ ಸುರೇಶ್ ಅವರಿಗೆ ಕರೆ ಮಾಡಿ ತಾನು ಮಾಳ ಚೌಕಿ ಎಂಬಲ್ಲಿ ಇದ್ದು, ವಿಷ ಸೇವಿಸಿರುವುದಾಗಿ ಹೇಳಿದ್ದರು. ಕೂಡಲೇ ಸುರೇಶ್ ಹಾಗೂ ಪ್ರಶಾಂತ್ ಸಹೋದರ ದಿನೇಶ್ ಮಾಳ ಚೌಕಿಗೆ ಹೋಗಿ ಹುಡುಕಾಡಿದಾಗ ಅಲ್ಲಿನ ಹಾಡಿಯೊಂದರಲ್ಲಿ ವಿಷ ಸೇವಿಸಿ ಅಸ್ಚಸ್ಥರಾಗಿದ್ದವರನ್ನು ಕೂಡಲೇ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಬ್ಬಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಜೂ.25 ರಂದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಪ್ರಶಾಂತ್ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






