Share this news

ಕಾರ್ಕಳ: ಮದುವೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಕುಣಿದು ಸಂಭ್ರಮಿಸುತ್ತಿದ್ದಾಗಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಬುಡನ್’ಬೆಟ್ಟು ಎಂಬಲ್ಲಿ ಸಂಭವಿಸಿದೆ.

ಉಡುಪಿಯ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಮೃತಪಟ್ಟ ಯುವಕ. ಮಿಯ್ಯಾರಿನ ಬುಡನ್’ಬೆಟ್ಟು ಮನೆಯೊಂದರಲ್ಲಿ ಭಾನುವಾರ ರಾತ್ರಿ ಮೆಹೆಂದಿ ಶಾಸ್ತ್ರ ಕಾರ್ಯಕ್ರಮದಲ್ಲಿ ರಾಕೇಶ್ ಯುವಕರ ಜತೆ ಡಿಜೆ ಸೌಂಡ್ ಪಿಲಿನಲಿಕೆ ಹಾಡಿಗೆ ‌ಭರ್ಜರಿಯಾಗಿ ಕುಣಿಯುತ್ತಿದ್ದರು. ಎರಡು ಬಾರಿ ಕುಣಿದು ಮೂರನೇ ಬಾರಿ ಯುವಕರ ಜತೆ ಹೆಜ್ಜೆ ಹಾಕುತ್ತಿದ್ದಾಗ ಏಕಾಎಕಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾದರು. ತಕ್ಷಣವೇ ಅವರನ್ನು ರಾತ್ರೋರಾತ್ರಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ರಾಕೇಶ್ ಪೂಜಾರಿ ರಕ್ತದೊತ್ತಡ ಕಡಿಮೆಯಾಗಿ ಕುಣಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಆದರೆ ವಿಪರೀತ ಡಿಜೆ ಸೌಂಡ್ಸ್ ಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

 

 

 

 

 

 

 

 

 

Leave a Reply

Your email address will not be published. Required fields are marked *