ಕಾರ್ಕಳ: ತಾಲೂಕಿನ ಕೆರ್ವಾಶೆ ಗ್ರಾಮದ ಹೊಸಮನೆ ಎಂಬಲ್ಲಿ ಪ್ರವೀಣ್ ಜೈನ್ ಎಂಬುವವರ ಪಟ್ಟಾ ಸ್ಥಳಕ್ಕೆ ತಾಗಿಕೊಂಡಿರುವ ಸರಕಾರಿ ಜಮೀನು ಸರ್ವೇ ನಂಬರ್ 13/1 ರಲ್ಲಿ ಕೆ ಚೆನ್ನಪ್ಪ ಮೂಲ್ಯ ರವರು ಅತಿಕ್ರಮಣ ಮಾಡಿದ್ದರು.
ಪ್ರವೀಣ್ ಜೈನ್ ರವರ ಜಾಗಕ್ಕೆ ಹೋಗಲು ಬೇರೆ ವ್ಯವಸ್ಥೆ ಇಲ್ಲದಿರುವ ಕಾರಣ ಚೆನ್ನಪ್ಪ ಮೂಲ್ಯ ರವರ ಜಮೀನಿನಲ್ಲಿ ಪ್ರವೀಣ್ ಜೈನ್ ರವರ ಪಟ್ಟಾಸ್ಥಳಕ್ಕೆ ಹೋಗಲು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್ ರವರ ಸಮ್ಮುಖದಲ್ಲಿ 6 ಮೀಟರ್ ಅಗಲದ ದಾರಿ ಅನುವು ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಮರ್ಣೆ ಕಂದಾಯ ನಿರೀಕ್ಷಕ ರಿಯಾಜ್, ಗ್ರಾಮ ಆಡಳಿತ ಅಧಿಕಾರಿ ರವಿಚಂದ್ರ ಪಾಟೀಲ್, ತಾಲೂಕು ಸರ್ವೆಯರ್ ಕಿಶೋರ್ ಪಾಟೀಲ್, ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು
K