ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ “ಸಾಹಿತ್ಯ ಸ್ಪಂದನ” ಎಂಬ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮ ಜು.1 ರಂದು ಜರುಗಿತು. ಸಾಹಿತ್ಯದ ಕುರಿತಾಗಿ ಸಾಹಿತ್ಯ ಸ್ಪಂದನ ಎಂಬ ಹೆಸರಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ನಿರ್ಮಿಸಲ್ಪಟ್ಟ ಪ್ರಮೋಶನಲ್ ವಿಡಿಯೋ ವನ್ನು ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯದ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಕಾದಂಬರಿಕಾರ, ಕವಿ, ಪತ್ರಕರ್ತ ಹಾಗೂ ಚಲನಚಿತ್ರ ಬರಹಗಾರರಾದ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ , ಖ್ಯಾತ ಬರಹಗಾರರಾದ ಗೋಪಾಲಕೃಷ್ಣ ಕುಂಟಿನಿ , ಖ್ಯಾತ ಲೇಖಕರಾದ ರಾಜಶೇಖರ ಹಳೆಮನೆ g, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್ , ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರು, ಪ್ರಖ್ಯಾತ ಲೇಖಕರೂ ಆಗಿರುವ ಅನುಬೆಳ್ಳೆ ನಾಮಾಂಕಿತ ರಾಘವೇಂದ್ರ ಬಿ ರಾವ್ , ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್ ಕೆ ಎಸ್ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ, ಪ್ರಮುಖ ಬರಹಗಾರರೂ ಆಗಿರುವ ಮಹೇಶ್ ಕೆ ಎನ್ ಪುತ್ತೂರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ವೃಂದದವರೂ ಪಾಲ್ಗೊಂಡಿದ್ದರು.
ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.