ಕಾರ್ಕಳ : ಕೆಲಸ ಕೊಡುತ್ತೇನೆಂದು ನಂಬಿಸಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.ಕಾರ್ಕಳ ತಾಲೂಕಿನ ಮುಲ್ಲಡ್ಕ ಗ್ರಾಮದ ಸುಚಿತ್ ವಂಚನೆಗೊಳಗಾದ ಯುವಕ.
ಸುಜಿತ್ ಉದ್ಯೋಗ ಹುಡುಕುತ್ತಿದ್ದು, ಆಪಾದಿತ ಮಂಗಳೂರು ಕದ್ರಿಯಲ್ಲಿರುವ ಸನ್ನಿಧಿ ಇಂಟಿರಿಯರ್ ಡಿಸೈನ್‌ನ ಅವಿನಾಶ್ ಎಂಬಾತ ತಮ್ಮಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಸುಚಿತ್ ಅವರ ಗೆಳತಿಯ ಹತ್ತಿರ ಮಂಗಳೂರು ಎಮ್‌ಆರ್‌ಪಿಎಲ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಹೇಳಿದ್ದು, ಅದರಂತೆ ಅವರು ಸುಚಿತ್ ಅವರಲ್ಲಿ ಈ ವಿಚಾರ ತಿಳಿಸಿರುತ್ತಾರೆ. ಅವಿನಾಶ್ ಹತ್ತಿರ ಸುಚಿತ್ ಈ ವಿಚಾರವಾಗಿ ಫೋನ್ ಮೂಲಕ ಮಾತನಾಡಿದಾಗ 1,05,600 ರೂ. ಹಣ ನೀಡಿದಲ್ಲಿ ಡಿ. 13 ರಂದು ಕೆಲಸ ಕೊಡಿಸುವುದಾಗಿ ನಂಬಿಸಿದ್ದರು.
ಇದನ್ನು ನಂಬಿದ ಸುಚಿತ್ ನವೆಂಬರ್ 18- 26 ರವರೆಗೆ ಆನ್‌ಲೈನ್ ಮೂಲಕ ಮತ್ತು 20,000 ರೂ. ಹಣವನ್ನು ನಗದಾಗಿ ಪಾವತಿಸಿರುತ್ತಾರೆ. ಆದರೆ, ಅವಿನಾಶ್ ಕೆಲಸ ಕೊಡಿಸದೆ ಸುಚಿತ್‌ಗೆ 1,05,600 ರೂ. ವಂಚಿಸಿರುತ್ತಾರೆ.
ಸುಚಿತ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.