ಕಾರ್ಕಳ:ರಾಜ್ಯದ ನಂಬರ್ ವನ್ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಈ ಬಾರಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಲೆಕುಡಿಯ ಸಮಾಜದ ಮಹಿಳಾ ಪ್ರತಿನಿಧಿ ಸೌಮ್ಯ ಅವರು ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದು ಇದು ಮಲೆಕುಡಿಯ ಸಮುದಾಯದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮಲೆಕುಡಿಯ ಸಮುದಾಯದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಹೇಳಿದ್ದಾರೆ.
ಕುಕ್ಕೆ ದೇವಸ್ಥಾನದ ನಿರ್ಮಾಣಕ್ಕೆ ಮೂಲ ಕಾರಣಕರ್ತರಾದ ಮಲೆಕುಡಿಯ ಸಮುದಾಯದವರನ್ನು ಪರಿಗಣಿಸಲಾಗುತ್ತಿದ್ದು ಆದರೆ ಈ ಬಾರಿ ಪ್ರಾರಂಭದಲ್ಲಿ ಸಮಿತಿಯಲ್ಲಿ ಮಲೆಕುಡಿಯರ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ಲಭ್ಯ ವಾದ ಹಿನ್ನೆಲೆಯಲ್ಲಿ ರಾಜ್ಯ
ಮಲೆಕುಡಿಯ ಸಂಘಟನೆ ಹಾಗೂ ಸ್ಥಳೀಯರು ವಿವಿಧ ಸ್ತರಗಳಲ್ಲಿ ಮುಜರಾಯಿ ಇಲಾಖೆ, ಹಾಗೂ ಸರಕಾರದ ಮೇಲೆ ನಿರಂತರ ಒತ್ತಡವನ್ನು ತಂದ ಕಾರಣದಿಂದ ವ್ಯವಸ್ಥಾಪನ ಸಮಿತಿಯಲ್ಲಿ ಮಲೆಕುಡಿಯರಿಗೆ ಸ್ಥಾನ ನೀಡಲಾಗಿದೆ ಎಂದು ಶ್ರೀಧರ ಗೌಡ ತಿಳಿಸಿದ್ದಾರೆ