ಮಂಗಳೂರು: ಕಳೆದ ನವೆಂಬರ್ ನಲ್ಲಿ ಪ್ರವಾಸಕ್ಕೆಂದು ಮಂಗಳುರಿಗೆ ಬಂದಿದ್ದ ಯುವತಿಯರು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೀಗ ಇಂತಹದೇ ಘಟನೆ ಮರುಕಳಿಸಿದ್ದು ಪ್ರವಾಸಕ್ಕೆಂದು ಬಂದಿದ್ದ ಮಡಿಕೇರಿ ಮೂಲದ ವ್ಯಕ್ತಿಯೊಬ್ಬರು ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್ ಮಂಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಬಿದ್ದು ದುರ್ಮರಣ ಹೊಂದಿದ್ದಾರೆ. ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲೇ ಅವರು ಸಾವಿಗೀಡಾಗಿದ್ದಾರೆ. ನಿಶಾಂತ್, ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕರಾಗಿದ್ದರು. ನಿಶಾಂತ್ ಪ್ರವಾಸಕ್ಕೆಂದು ಮಂಗಳೂರಿಗೆ ಸ್ನೇಹಿತನ ಜೊತೆ ತೆರಳಿದ ಸಂದರ್ಭ ದುರ್ಘಟನೆ ಸಂಭವಿಸಿದೆ. ನೀರಿಗೆ ಹಾರಿದ ನಂತರ ನಿಶಾಂತ್ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
K