Share this news

 

ಕಾರ್ಕಳ: ತಾಲೂಕಿನ ಮುಡಾರುವಿನಲ್ಲಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿ ಹಾಗೂ ಬೈಕ್ ಸವಾರ ಇಬ್ಬರೂ ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ಸುರೇಂದ್ರ ಅವರಿಗೆ ಕಾಲಿಗೆ ಪೆಟ್ಟಾಗಿದ್ದು ಗಾಜ್ರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸುರೇಂದ್ರ ಅವರು ಶನಿವಾರ ತಮ್ಮ ಮನೆಯ ಬಳಿ ರಿಕ್ಷಾದಿಂದ ಇಳಿದು ನಿಂತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಕೆರ್ವಾಶೆ ಕಡೆಗೆ ಹೋಗುತ್ತಿದ್ದ ವಿಶ್ವನಂದನ ಅವರ ಬೈಕ್ ಡಿಕ್ಕಿಯಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

Leave a Reply

Your email address will not be published. Required fields are marked *