ಹೆಬ್ರಿ: ದೀಪಾವಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಯುವಕನೊಬ್ಬ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿಯ ಬಲ್ಲಾಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಮುದ್ರಾಡಿ ಬಲ್ಲಾಡಿಯ ನಿವಾಸಿ ಹರೀಶ್ (45) ಎಂಬವರು ಮುದ್ರಾಡಿ ಮಂಜುನಾಥ ರವರ ಸೊಸೈಟಿ ಬ್ಯಾಂಕ್ ನಲ್ಲಿ ಪಿಗ್ಮಿ ಕೆಲಸ ಮಾಡಿಕೊಂಡಿದ್ದು ಅವರು ಅ. 31 ಗುರುವಾರ ರಂದು ರಾತ್ರಿ 10 ಗಂಟೆಯ ವೇಳೆಗೆ ದೀಪಾವಳಿ ಹಬ್ಬದ ಸಲುವಾಗಿ ಮನೆಯ ಹೊರಗಿನ ಛಾವಡಿ- ಅಂಗಳಕ್ಕೆ ವಿದ್ಯುತ್ ಲೈಟಿನಿಂದ ಅಲಂಕಾರ ಮಾಡುತ್ತಿದ್ದರು.
ಅಂಗಳದಲ್ಲಿ ಪ್ಲಾಸ್ಟಿಕ್ ಟೇಬಲ್ ಮೇಲೆ ನಿಂತು ಕೈಗಳಿಂದ ವಿದ್ಯುತ್ ಬಲ್ಬಿನ ಹೋಲ್ಡರ್ ಗೆ ಅಳವಡಿಸಿದ ವಿದ್ಯುತ್ ಪ್ಲಲ್ಗ್ ಗೆ ತೆಗೆಯುವಾಗ ಹರೀಶ್ರವರ ಬಲ ಕೈಗೆ ವಿದ್ಯುತ್ ಶಾಕ್ ಹೊಡೆದು ಹರೀಶ್ ರವರು ನಿಂತಿದ್ದ ಪ್ಲಾಸ್ಟಿಕ್ ಟೇಬಲ್ ನಿಂದ ಕೆಳಗೆ ಅಂಗಳಕ್ಕೆ ಎಸೆಯಲ್ವಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































