Share this news

ಹೆಬ್ರಿ,ಫೆ.06: ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಮದ್ಯವ್ಯಸನಿಯೊಬ್ಬರು ಮೃತಪಟ್ಟಿದ್ದಾರೆ.

ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಬೈಲು ನಿವಾಸಿ ಕೃಷ್ಣಾನಂದ ಶೆಟ್ಟಿ (47) ಎಂಬವರು ಮೃತಪಟ್ಟ ವ್ಯಕ್ತಿ.
ಕೃಷ್ಣಾನಂದ ಶೆಟ್ಟಿಯವರು ಕಳೆದ ಹಲವು ವರ್ಷಗಳಿಂದ ಗೋವಾದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ 5 ವರ್ಷಗಳ ಹಿಂದೆ ಊರಿಗೆ ಬಂದಿದ್ದರು.
ಊರಿಗೆ ಬಂದ ನಂತರ ಮದ್ಯ ಸೇವನೆ ಚಟದಿಂದ ಜಾಂಡೀಸ್ ಕಾಯಿಲೆ ಉಲ್ಬಣಗೊಂಡು ಗುರುವಾರ ಮಧ್ಯಾಹ್ನ ತಮ್ಮ ಮನೆಯಾದ ಮುನಿಯಾಲುಬೈಲು ಎಂಬಲ್ಲಿ ಮೃತಪಟ್ಟಿದ್ದಾರೆ.
ಈ ಕುರಿತು ಸುಂದರ ಶೆಟ್ಟಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *