
ಹೆಬ್ರಿ,ಫೆ.12: ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು ಇದರ ತ್ರಯೋದಶ. ಸಂಭ್ರಮವು ಮಾರ್ಚ್ 21ರಂದು ನಡೆಯಲಿದ್ದು,ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮುನಿಯಾಲಿನ ಮಾರಿಯಮ್ಮ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.
ಶಾಸಕ ಸುನಿಲ್ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಸಂತ ಗಿಳಿಯಾರ್, ಎಂ. ದಿನೇಶ್ ಪೈ,ಡಾ. ಸುದರ್ಶನ್ ಹೆಬ್ಬಾರ್, ರಾಘವೇಂದ್ರ ಭಟ್,
ಸಂತೋಷ್ ಪೂಜಾರಿ, ರಾಜೇಶ್ ಶೆಟ್ಟಿ ಮುನಿಯಾಲು, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುಹಾಸ್ ಶೆಟ್ಟಿ,ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.
ತ್ರಯೋದಶ ಸಂಭ್ರಮದ ಕಾರ್ಯಕ್ರಮದಲ್ಲಿ ಸಾಮೂಹಿಕ ಶನಿ ಪೂಜೆ, ಬಡವರಿಗೆ ಸಂಜೀವಿನಿ ಆರೋಗ್ಯ ನಿಧಿ ವಿತರಣೆ,
ಹಾಗೂ ವರಂಗ ಗ್ರಾಮ ಪಂಚಾಯತಿಗೆ ಶವಶಿತಲೀಕರಣ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮಗಳು ನಡೆಯಲಿದೆ.

.
.
.
.
.
.
.
.
.
.
