Share this news

ಕಾರ್ಕಳ, ಫೆ.03: ನೀರೆ ಗ್ರಾಮದ ನೀರೆ ನಾಟ್ಲ ಎಂಬಲ್ಲಿ ವ್ಯಕ್ತಿಯೊಬ್ಬರ ಸಾಕುನಾಯಿ ಸ್ಫೋಟಕ ತಿಂದು ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ.

ನೀರೆಯ ರವೀಂದ್ರ ಪೂಜಾರಿ ಅವರ ಸಾಕುನಾಯಿ ಫೆ.01 ರಂದು ಸಂಜೆಯ ವೇಳೆಗೆ ಹೊರಗಡೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಹುಡುಕಾಡಿದಾಗ ಮನೆಯ ಅನತಿ ದೂರದಲ್ಲಿ ತಲೆಯ ಭಾಗ ಸಂಪೂರ್ಣ ಛಿದ್ರವಾದ ಸ್ಥಿತಿಯಲ್ಲಿ ನಾಯಿಯ ಮೃತದೇಹ ಪತ್ತೆಯಾಗಿದೆ.
ಅಪರಿಚಿತರು ಪ್ರಾಣಿಹಿಂಸೆ ಮಾಡುವ ಉದ್ದೇಶದಿಂದ ಸ್ಪೋಟಕವನ್ನು ಇಟ್ಟಿದ್ದು, ನಾಯಿ ಅದನ್ನು ತಿಂದು ಮೃತಪಟ್ಟಿದೆ ಎಂದು ರವೀಂದ್ರ ಪೂಜಾರಿ ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *