
ಕಾರ್ಕಳ, ಜೂ.22: ಕಳೆದ 6 ತಿಂಗಳಿನಿಂದ ಕೆಡಿಪಿ ಸಭೆಯನ್ನು ನಡೆಸದೇ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುರಿತು ಶಾಸಕ ಸುನಿಲ್ ಕುಮಾರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಎಂ.ಪಿ ಮೊಯ್ದಿನಬ್ಬ ಆರೋಪಿಸಿದ್ದಾರೆ.
ಅವರು ಸೋಮವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಗೊಳಿಸುವುದು ಶಾಸಕರ ಕರ್ತವ್ಯವಾಗಿದೆ. ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಇಲಾಖಾ ಪ್ರಗತಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಆದರೆ ಕಾರ್ಕಳ ಶಾಸಕರು ಆ ಸಮಿತಿಯ ಅಧ್ಯಕ್ಷರಾಗಿ ಈ ಕೆಲಸವನ್ನು ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಕೇವಲ ಶಾಸಕರೊಬ್ಬರೇ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಸರ್ಕಾರದಿಂದ ನಾಮ ನಿರ್ದೇಶಿತರಾದ ಸದಸ್ಯರ ಕಡೆಗಣನೆ ಹಾಗೂ ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು ಸರ್ಕಾರದ ಯೋಜನೆ ಕಾರ್ಯಕ್ರಮಗಳು ನನ್ನ ಇಚ್ಛೆಗೆ ಅನುಗುಣವಾಗಿ ನಡೆಯಬೇಕು ಎಂಬ ದೋರಣೆ ಸರಿಯಲ್ಲ. ಸರ್ಕಾರದಿಂದ ನಾಮನಿರ್ದೇಶನಗೊಂಡವರಿಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ ಎಂಬುವುದನ್ನು ಶಾಸಕರ ಗಮನಕ್ಕೆ ತರ ಬಯಸುತ್ತೇವೆ.
ಕೆಡಿಪಿ ಸಭೆಯ ನಿರ್ಲಕ್ಷದ ಪರಿಣಾಮಕ್ಕೆ ಅತೀ ದೊಡ್ಡ ಉದಾಹರಣೆ ಸರಕಾರಿ ಆಸ್ಪತ್ರೆಯ ಮಹಿಳಾ ವೈದ್ದಾದಿಕಾರಿಗಳ ನೇಮಕಾತಿ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೆ ಎನ್ನುವ ಅನೇಕ ದೂರುಗಳು ಬಂದಿದ್ದವು ಒಂದು ವೇಳೆ ಕೆಡಿಪಿ ಸಭೆ ನಡೆಸಿದ್ದರೆ ಈ ಬಗ್ಗೆ ಚರ್ಚೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬಹುದಿತ್ತು ಈ ಬಗ್ಗೆ ಶಾಸಕರ ನಿರ್ಲಕ್ಷ ಸ್ಪಷ್ಟವಾಗಿ ಕಾಣುತ್ತದೆ ಯಾಕೆಂದರೆ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷೀಯವರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಒಂದೇ ದಿನ ವೈದ್ಯರ ನೇಮಕವಾಗುತ್ತದೆ ಆದರೆ ಕಳೆದ 22 ವರ್ಷಗಳಿಂದ ಎಂದಾದರೆ ಶಾಸಕರಾಗಿ ಸಚಿವರಾಗಿ ಅಧಿಕಾರ ನಡೆಸುವ ಶಾಸಕರಿಂದ ಇದು ಯಾಕೆ ಸಾದ್ಯವಾಗಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ ಎಂದರು.
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿಗೆ ಸಚಿವ ಯು.ಟಿ ಖಾದರ್ ಗೆ ಮನವಿ
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಒದಗಿಸಲು ಆರೋಗ್ಯ ಸಚಿವರಲ್ಲಿ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೆಡಿಪಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು, ಅಮಿತಾ ಶೆಟ್ಟಿ ಸಾಣೂರು, ಉಪಸ್ಥಿತರಿದ್ದರು



.
.
.
.
.
.
.
.
.
.
.
.
.
.
.
.
.
.
.
.
