ಕಾರ್ಕಳ:ಇತಿಹಾಸ ಪ್ರಸಿದ್ಧ ಕಾರ್ಕಳದ ನಿಟ್ಟೆಯ ನೆಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಸದ್ಗುರು ನಿತ್ಯಾನಂದ ಮಂದಿರದ ಜೀರ್ಣೋದ್ಧಾರ ಪ್ರಯುಕ್ತ ಬ್ರಹ್ಮಕಲಶೋತ್ಸವವು ಜ. 28 ರಿಂದ ಫೆ. 5 ರ ವರೆಗೆ ನಡೆಯಲಿದೆ. ಈ ಪ್ರಯುಕ್ತ ಜ.26 ರಂದು ಹಸಿರು ಹೊರೆಕಾಣಿಕೆ ಮೆರವಣಿಗೆಯು ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿ. ಸುನಿಲ್ ಕುಮಾರ್ ಕಾರ್ಕಳ ಪಡುತಿರುಪತಿ ವೆಂಕಟರಮಣ ದೇವಸ್ಥಾನದ 1 ನೇ ಆಡಳಿತ ಮೋಕೇಸರ ಜಯರಾಮ ಪ್ರಭು, ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಆಕರ್ಷಕ ಟ್ಯಾಬ್ಲೋಗಳು,ಅಘೋರಿ ನೃತ್ಯ, ಶಾರದಾ ಮಾತೆ, ಹುಲಿ ಕುಣಿತ ಕೇರಳ ಚೆಂಡೆ, ವಯೋಲಿನ್ ವಾದನ ಮುಂತಾದ ಕಲಾ ಪ್ರಕಾರಗಳು ಗಮನ ಸೆಳೆದವು. ದೇವಸ್ಥಾನದ ನೂತನ ರಜತ ಬಲಿಮೂರ್ತಿ, ಮುಗುಳಿ ಹಾಗೂ ಇತರ ಪರಿಕರಗಳನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು.
ದೇವಳದ ಆಡಳಿತ ಮೋಕ್ತೇಸರರಾದ ಸುನಿಲ್ ಕೆ ಆ,ರ್ ಅನುವಂಶಿಕ ಮೋಕ್ತೇಸರ ಜಗನ್ನಾಥ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚೇತನ್ ನಾಯಕ್,ಸುಮಿತ್ ಶೆಟ್ಟಿ ಸೇರಿದಂತೆ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.