
ಕಾರ್ಕಳ,ಡಿ.15: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಕೊರಳ ಮನೆ ನಿವಾಸಿ ದಯಾನಂದ ಮೂಲ್ಯ (52) ಮೃತಪಟ್ಟವರು.
ಅವರು ಮನೆಯ ಸಮೀಪದಲ್ಲಿ ಕ್ಯಾಂಟೀನ್ ನಡೆಸಿ ಜೀವನ ನಡೆಸುತ್ತಿದ್ದು ಇವರು ಕಳೆದ 25 ವರ್ಷಗಳಿಂದ ಮದ್ಯಪಾನದ ಚಟ ಹೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿಪರೀತ ಮದ್ಯಪಾನ ಮಾಡುತ್ತಿದ್ದು,ಡಿ.13 ರಂದು ಕ್ಯಾಂಟೀನ್ ನಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ವೇಳೆಗೆ ಗದ್ದೆಗೆ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
