
ಕಾರ್ಕಳ,ಜು.25: ಸ್ಥಳೀಯವಾಗಿ ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಂದಳಿಕೆ ಶ್ರೀಗುರು ದುರ್ಗಾ ಮಿತ್ರ ಮಂಡಳಿ ನಂದಳಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಮುಂದಿನ ಎರಡು ವರ್ಷಗಳ ಅವಧಿಯ ಕಾರ್ಯಚಟುವಟಿಕೆಗಳಿಗಾಗಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಸತೀಶ್ ಕೆ.
ಹಾಗೂ ಕಾರ್ಯದರ್ಶಿಯಾಗಿ ಅನಿತ ಮೊಲಿ ಡಿಸೋಜ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶ್ರೀಕಾಂತ್ ಆಚಾರ್ಯ, ಸ್ಥಾಪಕ ಅಧ್ಯಕ್ಷ ಕಿರಣ್ ಚೌಟ, ಉಪಾಧ್ಯಕ್ಷೆ ಅಮಿತ ಶೆಟ್ಟಿ, ಜೊತೆ ಕಾರ್ಯದರ್ಶಿ: ನಿತಿನ್ ಚೌಟ, ಕೋಶಾಧಿಕಾರಿಯಾಗಿ ಪತ್ರಕರ್ತ ಹರಿಪ್ರಸಾದ್ ನಂದಳಿಕೆ, ಗೌರವ ಸಲಹೆಗಾರಾಗಿ ಜೊಯ್ಸ್ ಟೆಲ್ಲಿಸ್, ಅರುಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.



.
.
.
.
.
.
.
.
.
.
.
.
.
.
.
.
.
.
.
.
