ಕಾರ್ಕಳ : ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅಭಿಷೇಕ್ ಎಸ್. ರಾವ್ ಅವರು ‘ಡಿಸೈನ್ ಆಫ್ ಸ್ಕೋರ್ ಬೇಸ್ಡ್ ಮಾಡೆಲ್ ಫಾರ್ ಪ್ರೆಡಿಕ್ಟಿಂಗ್ ಮೋರ್ಟಾಲಿಟಿ ಇನ್ ಅಕ್ಯೂಟ್ ಫೆಬ್ರಾಯ್ಲ್ ಇಲ್ನೆಸ್ ವಿಥ್ ಲೋ ಪ್ಲೇಟ್ಲೆಟ್ ಕೌಂಟ್ ಸಿಂಡ್ರೋಮ್’ ಎಂಬ ವಿಷಯದ ಕುರಿತು ಬರೆದ ಸಂಶೋಧನಾ ಪ್ರಬಂಧಕ್ಕೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಘೋಷಿಸಿದೆ.
ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಕಾರ್ತಿಕ್ ಪೈ ಬಿ ಎಚ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.