

ನವದೆಹಲಿ, ಅಕ್ಟೋಬರ್ 02: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತ ವಿವಾದ ಹಾಗೂ ಮತ ಕಳ್ಳತನದ ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದ್ದು, 13 ಕೋಟಿ ಮತಗಳ ರದ್ದತಿ ಸುಳ್ಳು ಎಂದು ಸತ್ಯಾಂಶಗಳ ಮೂಲಕ ವಿವರಣೆ ನೀಡಿದೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಗೆ ಸಂಬAಧಿಸಿದAತೆ ಚುನಾವಣಾ ಆಯೋಗದೊಳಗೆ ಭಿನ್ನಾಭಪ್ರಾಯಗಳಿವೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಎಲೆಕ್ಟೋರಲ್ ರೋಲ್ ಡಾಟಾಬೇಸ್ ಪ್ಲಾಟ್ಫಾರ್ಮ್ ಆದ ‘ಇಸಿಐನೆಟ್’ ಕೇಂದ್ರೀಕರಣ, ಫಾರ್ಮ್-6 ರಲ್ಲಾದ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ನಿರ್ಧಾರಗಳ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಚಾರವಾಗಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳೂ ಸಭೆ ನಡೆಸಿ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದವು. ಆದರೆ, ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಆಯೋಗದ ಮೂಲಗಳು, ಮೂವರು ಸದಸ್ಯರನ್ನೊಳಗೊಂಡ ಆಯೋಗವು ಕೈಗೊಂಡ ಪ್ರತಿಯೊಂದು ನಿರ್ಧಾರವೂ ಸಂಪೂರ್ಣ ಸರ್ವಾನುಮತದಿಂದ ಕೂಡಿದೆ ಎಂದು ತಿಳಿಸಿವೆ.
ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರ ಪಟ್ಟಿ ಸರಿಪಡಿಸಲು ಕಾನೂನುಬದ್ಧವಾಗಿ ನಡೆದುಕೊಂಡು ಬಂದಿರುವ ನಿರಂತರ ಪ್ರಕ್ರಿಯೆಯಾಗಿದೆ. ಮೃತರು, ನಕಲಿ, ಪುನರಾವರ್ತನೆಯಾದ ಹಾಗೂ ವಿಳಾಸ ಬದಲಿಸಿದ ಮತದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕುವುದು ಮತ್ತು ಅರ್ಹ ಮತದಾರರ ಹೆಸರುಗಳನ್ನು ಉಳಿಸಿಕೊಳ್ಳುವುದೇ ಇದರ ಮುಖ್ಯ ಉದ್ದೇಶವಾಗಿದೆ. ಹೊಸ ಮತದಾರರು ನೋಂದಣಿಗೆ ಬಳಸುವ ಫಾರ್ಮ್-6 ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದಿರುವ ಆಯೋಗ, ಸುಪ್ರೀಂ ಕೋರ್ಟ್ ಕೂಡ ಈ ಪ್ರಕ್ರಿಯೆಗೆ ಎಂದಿಗೂ ತಡೆ ನೀಡಿಲ್ಲ ಎಂಬುದನ್ನು ನೆನಪಿಸಿದೆ. ಮತದಾರರಿಗೆ ರಕ್ಷಣೆ ನೀಡುವ ನಿಯಮಗಳೊಂದಿಗೆ ಮತದಾರರ ಘೋಷಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯನ್ನು ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೆ, 1987ರ ನಂತರ ಜನಿಸಿದ ಮತದಾರರಿಂದ ಮಾತ್ರ ಅಗತ್ಯ ದಾಖಲೆಗಳನ್ನು ಪಡೆಯಲಾಗುತ್ತಿದ್ದು, ತಂತ್ರಾAಶದ ಮೂಲಕ ನಕಲಿ ಹೆಸರುಗಳನ್ನು ನಿಖರವಾಗಿ ಪತ್ತೆಹಚ್ಚಲಾಗುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹೆಸರುಗಳನ್ನು ಸೇರಿಸುವ ಅಥವಾ ತೆಗೆದುಹಾಕುವ ಪ್ರಕ್ರಿಯೆಯನ್ನು ಮುಖ್ಯ ಚುನಾವಣಾ ಆಯುಕ್ತರು ವೈಯಕ್ತಿಕವಾಗಿ ನಿರ್ವಹಿಸುವುದಿಲ್ಲ. ಬದಲಿಗೆ ಇದು ಸಂಪೂರ್ಣ ವಿಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಹಾಗೂ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ (ಎಇಆರ್ಒ) ಮಟ್ಟದಲ್ಲಿ ನಡೆಯುತ್ತದೆ. ಈ ಕಾರ್ಯದಲ್ಲಿ ತೊಡಗಿರುವ ಸುಮಾರು 25,000 ಅಧಿಕಾರಿಗಳಲ್ಲಿ ಯಾರೊಬ್ಬರೂ ಈ ಪ್ರಕ್ರಿಯೆಯ ಕುರಿತು ಯಾವುದೇ ದೂರು ನೀಡಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ತಾಂತ್ರಿಕ ದೋಷದಿಂದ ಗೋವಾದಲ್ಲಿ 97 ಮತದಾರರ ಹೆಸರುಗಳು ಕೈಬಿಟ್ಟು ಹೋಗಿತ್ತು. ಈಗಾಗಲೇ ಆ ಪೈಕಿ 88 ಹೆಸರುಗಳನ್ನು ಮರುಸೇರಿಸಲಾಗಿದ್ದು, ತನಿಖೆ ವೇಳೆ ಉಳಿದವರಲ್ಲಿ ಮೂವರು ಪೋರ್ಚುಗೀಸ್ ಪೌರತ್ವ ಹೊಂದಿರುವುದು ಮತ್ತು ಆರು ಮಂದಿ ವಿದೇಶದಲ್ಲಿ ನೆಲೆಸಿರುವುದು ಕಂಡುಬAದಿದೆ. ಮತ್ತೊಂದೆಡೆ, ದೆಹಲಿಯ ಬೇಲಾ ಎಸ್ಟೇಟ್ನಲ್ಲಿ 727 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೂ ಆಯೋಗ ಪ್ರತಿಕ್ರಿಯಿಸಿದ್ದು, ಬಿಎಲ್ಒಗಳು ಪರಿಶೀಲನೆಗೆ ತೆರಳಿದಾಗ ಅಲ್ಲಿ ಯಾರೂ ಇರಲಿಲ್ಲ. ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ದೆಹಲಿಯಲ್ಲಿ ಇನ್ನೂ ಪ್ರಗತಿಯಲ್ಲಿದೆ. ಬಿಎಲ್ಒಗಳಿಗೆ ಎಸ್ಐಆರ್ ಫಾರ್ಮ್ ಭರ್ತಿ ಮಾಡಿ ಸಹಿ ಸಲ್ಲಿಸಿದ ಪ್ರತಿಯೊಬ್ಬರ ಹೆಸರೂ ಕರಡು ಪಟ್ಟಿಯಲ್ಲಿ ಖಚಿತವಾಗಿ ಪ್ರಕಟವಾಗಲಿದೆ ಎಂದು ತಿಳಿಸಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
