Share this news

ಕಾರ್ಕಳ: ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆಕ್ಷೇಪಿಸಿ ಕಾರ್ಕಳದ ಪ್ರತಿಷ್ಠಿತ ಕಾಲೇಜಿನ‌ ಹಾಸ್ಟೆಲ್ ಒಂದರಲ್ಲಿ ದೇಶದ ಅಖಂಡತೆಗೆ ಧಕ್ಕೆ ಬರುವ ರೀತಿಯ ಆಕ್ಷೇಪಾರ್ಹ ಗೋಡೆಬರಹ ಬರೆಯಲಾಗಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂಲಗಳ ಪ್ರಕಾರ ಹೊರರಾಜ್ಯದ ವಿದ್ಯಾರ್ಥಿಗಳ ಕೃತ್ಯ ಇದಾಗಿದೆ ಎನ್ನಲಾಗಿದ್ದು, ಗೋಡೆಯಲ್ಲಿ ಹಿಂದೂಸ್ತಾನ್ ನಹೀ ಮುಸ್ಲಿಂಸ್ತಾನ್ ಬೋಲೋ,ಮುಸ್ಲಿಂ ಜಿಂದಾಬಾದ್ ಎಂದು ಬಾಲ್ ಪೆನ್ನಿನಲ್ಲಿ ಬರೆದಿರುವ ಗೋಡೆ ಬರಹ ಕಂಡುಬಂದಿದೆ.

ಈ ಬರಹದ ಕುರಿತು ಈ ವರೆಗೂ ಯಾವುದೇ ದೂರು ದಾಖಲಾಗಿಲ್ಲ. ಉದ್ದೇಶಪೂರ್ವಕವಾಗಿ ಈ ವಿವಾದಾತ್ಮಕ ಬರಹ ಬರೆಯಲಾಗಿದೆಯೇ ಅಥವಾ ಕಿಡಿಗೇಡಿಗಳ ಕೃತ್ಯ ಇರಬಹುದೇ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

 

 

 

 

 

 

 

 

 

Leave a Reply

Your email address will not be published. Required fields are marked *