ಕುಕ್ಕುಂದೂರು: ಯುವಕ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ, ಫೆ.21: ತಾಲೂಕಿನ ಕುಕ್ಕುಂದೂರು ಎಂಬಲ್ಲಿ ಚಿಕ್ಕಮಗಳೂರು ಮೂಲದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಚಿಕ್ಕಮಗಳೂರಿನ ಸಚಿನ್ ಶೆಟ್ಟಿ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆತ ಫೆ.20 ರಂದು ಕುಕ್ಕುಂದೂರಿನ ನಾಗ ಎಂಟರ್ಪ್ರೈಸರ್ಸ್ ಕಟ್ಟಡದ 3ನೇ ಮಹಡಿಯ ಬಾಡಿಗೆ ಮನೆಯಲ್ಲಿ ಮೇಲ್ಛಾವಣಿಯ…
ದೆಹಲಿಯ ಕೆಂಪುಕೋಟೆ ಸೇರಿದಂತೆ ಹಿಂದೂ ದೇವಾಲಯಗಳ ಮೇಲೆ ಉಗ್ರರ ದಾಳಿ ಸಾಧ್ಯತೆ: ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ: ಪೊಲೀಸರಿಂದ ಹೈಅಲರ್ಟ್
ನವದೆಹಲಿ, ಫೆ,21: ದೆಹಲಿಯ ಕೆಂಪು ಕೋಟೆ ಸೇರಿದಂತೆ ಹಲವು ದೇವಸ್ಥಾನಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಮಾಹಿತಿ ಇದೆಯೆಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಭದ್ರತಾ ಸಂಸ್ಥೆಗಳು ಹಾಗೂ ಪೊಲೀಸರು ತೀವ್ರ ಕಟ್ಟೆಚ್ಚೆರ ವಹಿಸಿದ್ದಾರೆ. ಗುಪ್ತಚರ ಮೂಲಗಳ ಪ್ರಕಾರ ಚಾಂದಿನಿ…
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಏಕಪವಿತ್ರ ನಾಗಮಂಡಲ: ಪ್ರಕೃತಿಯ ಆರಾಧನೆಯ ಜೊತೆ ಮೇಳೈಸಿದ ಕೃಷಿ ರಂಗ: ಸಾಧಕ ರೈತನಿಗೆ ಒಲಿದ ರೈತ ಪೀಠ ಪ್ರಶಸ್ತಿ: ಸಾವಯವ ಕೃಷಿಯಿಂದ ಮಾತ್ರ ಬದುಕು ಉಳಿಯಲಿದೆ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ಕಾರ್ಕಳ, ಫೆ.20: ನಮ್ಮ ಮುಂದಿನ ಪೀಳಿಗೆಗೆ ನಾವು ಪರಿಶುದ್ಧ ಪ್ರಕೃತಿಯನ್ನು ಬಿಟ್ಟುಹೋಗಬೇಕು, ಅಂತಹ ಮಹಾನ್ ಕಾರ್ಯವನ್ನು ಮುನಿಯಾಲು ಸಂಜೀವಿನಿ ಗೊಧಾಮದ ಮೂಲಕ ರಾಮಕೃಷ್ಣ ಆಚಾರ್ ಅವರು ಮಾಡುತ್ತಿದ್ದಾರೆ. ಕೃಷಿಯಿಂದಲೇ ದೇಶದ ಭವಿಷ್ಯದ ಬೆಳವಣಿಗೆ ಸಾಧ್ಯವಿದೆ. ಅದು ಮುಂದಿನ ಅನಿವಾರ್ಯ ಕೂಡ ಆಗಲಿದೆ,…
ನಾಳೆ(ಫೆ.21) ಕಾರ್ಕಳ ತಾಲೂಕಿನ ವಿವಿಧೆಡೆ ಕರೆಂಟಿಲ್ಲ
ಕಾರ್ಕಳ,ಫೆ20: ನಾಳೆ (ಫೆ.21) 33ಕೆವಿ ಸ್ಟೇಷನ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ, 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಜಗೋಳಿ, ಹೊಸ್ಮಾರು ಫೀಡರ್ ಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಘಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದ್ದರಿಂದ ಕಾರ್ಕಳ ತಾಲೂಕಿನ…
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು,ಫೆ.20: ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಇನ್ನುಮುಂದೆ ಚಿತ್ರೀಕರಣಕ್ಕೆ ಅನುಮತಿ ಕಡ್ಡಾಯಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ದೇವಸ್ಥಾನಗಳಲ್ಲಿ ಯಾವುದೇ ಚಿತ್ರೀಕರಣ ಮಾಡಬೇಕಿದ್ದರೆ ಮುಜರಾಯಿ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ರಾಜ್ಯದ ಎಲ್ಲಾ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಸಿನಿಮಾ,…
ನಿಟ್ಟೆ: ಎಂಸಿಎ ವಿಭಾಗದಿಂದ ಟೆಕ್-ನೋ’26 ತಾಂತ್ರಿಕ ಮಹೋತ್ಸವ
ಕಾರ್ಕಳ,ಫೆ.20: ‘ಕೃತಕ ಬುದ್ಧಿಮತ್ತೆಯು (AI) ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತದೆ ಎಂದು ದೂರುವುದರ ಬದಲು ಅದನ್ನು ಬಳಸಿಕೊಂಡು ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ಉಡುಪಿಯ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಅರುಣಾಚಲ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ…
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ಆಚರಣೆ
ಮಣಿಪಾಲ, ಫೆ.20: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು (ICCD)ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಪಾಲಕರು ಹಾಗೂ ಕ್ಯಾನ್ಸರ್ ಗೆದ್ದ ಬದುಕಿನ ಹೋರಾಟಗಾರರು ಒಂದಾಗಿ ಸೇರಿ ಜಾಗೃತಿ ಮೂಡಿಸಿ, ಧೈರ್ಯಶಾಲಿ ಮಕ್ಕಳಿಗೆ ಬೆಂಬಲ ಸೂಚಿಸುವ ಮೂಲಕ ಹೃದಯಸ್ಪರ್ಶಿಯಾಗಿ…
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ವಿಧ್ಯುಕ್ತ ಚಾಲನೆ
ಕಾರ್ಕಳ, ಫೆ.20: ಹೆಬ್ರಿ ತಾಲೂಕಿನ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ‘ಪ್ರಕೃತಿಯಿಂದ ಪ್ರಕೃತಿಗೆ’ ಎಂಬ ವಿನೂತನ ಪರಿಕಲ್ಪನೆಯಲ್ಲಿ ಫೆಬ್ರವರಿ 21 ರಂದು ನಡೆಯಲಿರುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗುರುವಾರ ಭಕ್ತಿಪೂರ್ವಕ…
ನಂದಳಿಕೆ: ಕಾರಿಗೆ ಸೈಡ್ ಕೊಡದ ವಿಚಾರದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ದೂರು,ಪ್ರತಿ ದೂರು
ಕಾರ್ಕಳ, ಫೆ.19: ಕಾರಿಗೆ ಸೈಡ್ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ಎರಡು ತಂಡಗಳ ನಡುವೆ ಉಂಟಾದ ಸಣ್ಣ ಜಗಳ ಬಳಿಕ ವಿಕೋಪಕ್ಕೆ ತೆರಳಿ ಪರಸ್ಪರ ಹೊಡೆದಾಡಿಕೊಂಡು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದೆ. ಕಾರ್ಕಳ…
ರಾಜಕೀಯ ಪಕ್ಷಗಳು ನೀಡುವ ಉಚಿತ ಗ್ಯಾರಂಟಿಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿ: ಉಚಿತ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ
ನವದೆಹಲಿ, ಫೆ. 19: ರಾಜಕೀಯ ಪಕ್ಷಗಳು ನೀಡುವ ಉಚಿತ ಗ್ಯಾರಂಟಿಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ರಾಜ್ಯಗಳು ವಿತರಿಸುತ್ತಿರುವ ಉಚಿತ ಕೊಡುಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ…
