ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಅವರಿಗೆ ಸನ್ಮಾನ
ಕಾರ್ಕಳ: ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಜರಗುವ ವರ್ಷಾವಧಿ ಬಲಿ ಉತ್ಸವ ಮೆರವಣಿಗೆಯ ಸಂದರ್ಭ ದೇವರಾಧನೆ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ, ದೇವಳಕ್ಕೆ ಸುಮಾರು 55 ವರ್ಷಗಳಿಂದ ದೇವರು ಹೊರುವ ಬಲಿ ಸೇವೆಯನ್ನು…
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
ಬೆಂಗಳೂರು : 2011-12ನೇ ಸಾಲಿನಿಂದ ನಿವೃತ್ತಿಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.…
ನ.15 ರಂದು ಕಾರ್ಕಳದಲ್ಲಿ ಪಟ್ಲ ಫೌಂಡೇಶನ್ ನ ವಾರ್ಷಿಕ ಸಮಾರಂಭ
ಕಾರ್ಕಳ: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಕಳ ಘಟಕದ ಹತ್ತನೇ ವಾರ್ಷಿಕ ಸಮಾರಂಭವು ನವೆಂಬರ್ 15 ರಂದು ಶನಿವಾರ ಕಾರ್ಕಳ ಬಸ್ಸು ನಿಲ್ದಾಣ ಬಳಿಯ ಮಾರಿಗುಡಿ ವಠಾರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ನ…
ಮಣಿಪಾಲ ಜ್ಞಾನಸುಧಾ : ಎನ್.ಸಿ.ಸಿ. ನೇವಿ(ನೌಕಾದಳ) ಉದ್ಘಾಟನೆ: ಜೀವನದ ಆಕಾಂಕ್ಷೆಗಳ ಜೊತೆಗೆ ದೇಶ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು- ಕ್ಯಾಪ್ಟನ್ ಗಣೇಶ್ ಕಾರ್ಣಿಕ್- ಕಲ್ಪವೃಕ್ಷದಂತೆ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ : ಕಮಾಂಡರ್ ಅಶ್ವಿನ್ ಎಂ. ರಾವ್
ಕಾರ್ಕಳ: ನಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಆಸೆ ಆಕಾಂಕ್ಷೆ, ಕನಸುಗಳನ್ನು ಸಿಗುವ ಅವಕಾಶಗಳಿಂದ ಈಡೇರಿಸಿಕೊಳ್ಳುವುದರ ಜೊತೆಗೆ, ದೇಶ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಮನಸ್ಸಿನ ನಿಗ್ರಹ ನಮ್ಮ ಹತೋಟಿಗೆ ಬರುವುದು ಶಿಕ್ಷಣದಿಂದ ಮಾತ್ರ. ಅದರೊಂದಿಗೆ ಎನ್.ಸಿ.ಸಿ ಯಂತಹ ಅತ್ಯುತ್ತಮ ಸಂಘಟನೆಯನ್ನು…
ವಂದೇ ಮಾತರಂಗೆ 150 ವರ್ಷದ ಸಂಭ್ರಮ : ಕಾರ್ಕಳ ಬಿಜೆಪಿ ವತಿಯಿಂದ ವಂದೇ ಮಾತರಂ ಗಾಯನ
ಕಾರ್ಕಳ : ವಂದೇ ಮಾತರಂ ಗೀತೆಗೆ 150 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಅ. 7ರಂದು ಬೆಳಿಗ್ಗೆ 10.30ಕ್ಕೆ ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮವು ವಿಕಾಸ ಕಚೇರಿಯಲ್ಲಿ ಶಾಸಕರು ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ಕಾರ್ಕಳದ ಮಂಡಲಾಧ್ಯಕ್ಷರಾದ…
ಅನ್ನಭಾಗ್ಯ ಯೊಜನೆ :ಇಂದಿರಾ ಕಿಟ್ ನಲ್ಲಿ ಹೆಸರುಕಾಳಿನ ಬದಲು ತೊಗರಿಬೇಳೆ ನೀಡಲು ನಿರ್ಧಾರ
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ಘೋಷಿಸಿದ್ದ ಸರ್ಕಾರ, ಅದರಲ್ಲಿ ನೀಡಲು ಉದ್ದೇಶಿಸಿದ್ದ ಆಹಾರ ಧಾನ್ಯಗಳನ್ನು ಪರಿಷ್ಕರಣೆ ಮಾಡಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ‘ಇಂದಿರಾ ಪೌಷ್ಟಿಕ ಆಹಾರ…
ಕಾರ್ಕಳ: ಅಕ್ರಮ ಮರಳು ಸಾಗಾಟ,ಪ್ರಕರಣ ದಾಖಲು
ಕಾರ್ಕಳ: ನುರಾಳ್ ಬೆಟ್ಟು ಕ್ರಾಸ್ ಬಳಿ ನೂರಾಳ್ ಬೆಟ್ಟು ಕಡೆಯಿಂದ ಹೊಸ್ಮಾರ್ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಕಪ್ ಚಾಲಕ ಜೀವಿತ್ ಮತ್ತು ಈದು ಗ್ರಾಮದ ಪ್ರಶಾಂತ್ ಸೇರಿಕೊಂಡು ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆಯದೇ ಈದು ಗ್ರಾಮದ ಕುಡ್ಯೆ…
ರಾಜಧನ ಇಳಿಕೆಯಾದರೂ ಕೆಂಪುಕಲ್ಲು ಬಲು ದುಬಾರಿ: ಮನೆಕಟ್ಟುವ ಬಡವರ ಕನಸಿಗೆ ಕೊಳ್ಳಿಯಿಟ್ಟ ಕಲ್ಲುಕೋರೆ ಹಾಗೂ ಲಾರಿ ಮಾಲೀಕರು: ವೈಜ್ಞಾನಿಕ ದರ ನಿಗದಿಗೆ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು, ನ.07: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿರುವುದನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು, ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರ ಸಭೆ ನಡೆಸಿ ಸೂಕ್ತ ಕ್ರಮ ವಹಿಸ ಬೇಕೆಂದು…
ಕಾಡುಹೊಳೆಯಲ್ಲಿ ಪಿಕಪ್-ಕಾರು-ಬೈಕ್ ಸರಣಿ ಅಪಘಾತ: ಪಿಕಪ್ ಚಾಲಕನ ಓವರ್’ಟೇಕ್ ಅವಾಂತರ: ಬೈಕ್ ಸವಾರನಿಗೆ ಗಾಯ
ಕಾರ್ಕಳ, ನ.06:ಕಾಡುಹೊಳೆ ಹಾಲಿನ ಡೈರಿನ ಸಮೀಪದ ಇಳಿಜಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಪಿಕಪ್ ಚಾಲಕ ಮುಂದಿನಿಂದ ಹೋಗುತ್ತಿದ್ದ ಬೈಕನ್ನು ಓವರ್’ಟೇಕ್ ಮಾಡಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಕಾರಿನ ಡಿಕ್ಕಿಯಾದ ಪಿಕಪ್ ಬಳಿಕ ಬೈಕಿಗೆ ಬಡಿದು ಬೈಕ್ ಸವಾರ ಗಾಯಗೊಂಡ ಘಟನೆ ಗುರುವಾರ…
ಅಜೆಕಾರು: ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕನ ಚಿನ್ನ ಎಗರಿಸಿದ್ದ ನಕಲಿ ಸಾಧು ಬಂಧನ
ಕಾರ್ಕಳ: ತಾಲೂಕಿನ ಅಜೆಕಾರಿನಲ್ಲಿ ಕಳೆದ9 ತಿಂಗಳ ಹಿಂದೆ ನಕಲಿ ಸಾಧುವಿನ ವೇಷದಲ್ಲಿ ಬಂದು ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕರೊಬ್ಬರ ಚಿನ್ನಾಭರಣವನ್ನು ಎಗರಿಸಿದ್ದ ಅಸಲಿ ಕಳ್ಳನನ್ನು ಪೊಲೀಸರು ಸೆರೆ ಹಿಡಿದು, ಆತನಿಂದ ಕಳವುಗೈದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಕಾರ್ಗೋನ್ ಜಿಲ್ಲೆಯ ಕರಣ್ ನಾಥ್ ಬಂಧಿತ…
