ನಾಳೆ(ಜ.19) ಜಿಲ್ಲಾ ಹೈನುಗಾರ ರೈತರ ಬೃಹತ್ ಜನಾಂದೋಲನ ಸಭೆ : ಸಾಣೂರು ನರಸಿಂಹ ಕಾಮತ್
ಕಾರ್ಕಳ: ಫೆಬ್ರವರಿ ತಿಂಗಳಿನಲ್ಲಿ ರಾಜ್ಯ ಸರಕಾರ ಬಜೆಟ್ ಮಂಡಿಸಲಿದ್ದು, ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀಟರಿಗೆ ಕನಿಷ್ಠ 5ರೂ. ಪ್ರೋತ್ಸಾಹ ಧನ ಮತ್ತು ದುಬಾರಿಯಾಗಿರುವ ನಂದಿನಿ ಪಶು ಆಹಾರಕ್ಕೆ ಕೆಜಿಗೆ ಕನಿಷ್ಠ 5.ರೂ ಸಬ್ಸಿಡಿ ಒದಗಿಸಲು ಬಜೆಟ್ ನಲ್ಲಿ ವಿಶೇಷ ಅನುದಾನ…
ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ಆಯ್ಕೆ
ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ರವರು ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಬಾವ ಟೈಲರ್, ಕೋಶಾಧಿಕಾರಿಯಾಗಿ ಅಹ್ಮದ್ ಹುಸೇನ್ ಬೊರ್ಗಲ್ ಗುಡ್ಡೆ ಸದಸ್ಯರುಗಳಾಗಿ ಮೊಯಿದ್ದಿನ್ ಮೊಹಮ್ಮದ್ ಅಲಿ…
ಬೈಲೂರು ಪರಶುರಾಮ ಥೀಮ್ ಪಾರ್ಕ್ ಕಾರ್ಯಕ್ರಮದ ಕಾರ್ಯಾಲಯದ ಉದ್ಘಾಟನೆ : ಪ್ರವಾಸೋದ್ಯಮ ಅಭಿವೃದ್ಧಿಯಿಂದ ಆರ್ಥಿಕತೆಗೆ ಚೈತನ್ಯ- ವಿನಯ್ ಹೆಗ್ಡೆ
ಕಾರ್ಕಳ:ತುಳುನಾಡಿನ ಸೃಷ್ಟಿಕರ್ತನನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಸಚಿವ ಸುನಿಲ್ ಕುಮಾರ್ ಅವರ ಅದ್ಬುತ ಪರಿಕಲ್ಪನೆಯಾದ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮವು ಕೇವಲ ತುಳುನಾಡಿನ ಸಂಸ್ಕೃತಿಯ ಅನಾವರಣವಲ್ಲ ಜತೆಗೆ ಕಾರ್ಕಳವು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಕೇಂದ್ರವಾಗುವುದರ ಜತೆಗೆ ಆರ್ಥಿಕತೆಗೆ ಚೈತನ್ಯ ನೀಡಲಿದೆ…
ಜನ ಸಾಮಾನ್ಯರಿಗೆ ರಿಲೀಫ್ : ಪ್ಯಾರಸಿಟಮಾಲ್ ಸೇರಿ 128 ಔಷಧಿಗಳ ಬೆಲೆ ಇಳಿಕೆ
ನವದೆಹಲಿ: ಜ್ವರವಿರಲಿ, ಕೆಮ್ಮು-ಶೀತವಿರಲಿ ಅಥವಾ ತಲೆನೋವೇ ಇರಲಿ ಹೆಚ್ಚಿನವರು ತಕ್ಷಣ ತೆಗೆದುಕೊಳ್ಳುವುದು ಪ್ಯಾರಸಿಟಮಾಲ್. ವೈದ್ಯರ ಬಳಿ ಹೋದ್ರೆ ಎಕ್ಸ್‌ರೇ, ಸ್ಕ್ಯಾನಿಂಗ್ ಎಂದು ಸಿಕ್ಕಾಪಟ್ಟೆ ಫೀಸ್ ಹಾಕ್ತಾರೆ ಎಂದುಕೊಂಡು ಹೆಚ್ಚಿನವರು ಸುಲಭವಾಗಿ ಪ್ಯಾರಾಸಿಟಮಮಾಲ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ. ಯಾವುದೇ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಈ…
ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನ: ಪುಸ್ತಕ ಮಳಿಗೆ ತೆರೆಯಲು ಅವಕಾಶ
ಹೆಬ್ರಿ : ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜ.30 ರಂದು ನಡೆಯಲಿರುವ ಹೆಬ್ರಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಪುಸ್ತಕ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸಮ್ಮೇಳನವನ್ನು ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಖ್ಯಾತ…
ಸರ್ಕಾರಿ ನೌಕರನ ಮರಣದ ನಂತರ ದತ್ತು ಪಡೆದ ಮಗು ಕುಟುಂಬ ಪಿಂಚಣಿಗೆ ಅರ್ಹರಲ್ಲ: ಸುಪ್ರೀಂ ಕೋರ್ಟ್
ನವದೆಹಲಿ. ಸರ್ಕಾರಿ ನೌಕರ ಪತಿಯ ಮರಣದ ನಂತರ ವಿಧವೆಯೊಬ್ಬಳು ದತ್ತು ಪಡೆದ ಮಗುವಿಗೆ ಕುಟುಂಬ ಪಿಂಚಣಿಗೆ ಅರ್ಹತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ತೀರ್ಪಿನಲ್ಲಿ ಹೇಳಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ, 1956 ರ ಸೆಕ್ಷನ್ 8…
ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆ
ದೆಹಲಿ: ಚುನಾವಣಾ ಆಯೋಗವು ಇಂದು (ಬುಧವಾರ) ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಸಮಿತಿಯು ಇಂದು ಮಧ್ಯಾಹ್ನ 2.30ಕ್ಕೆ ಇಲ್ಲಿ ಪತ್ರಿಕಾಗೋಷ್ಠಿ ಕರೆದಿದೆ. ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತದಲ್ಲಿದ್ದು, ಮೇಘಾಲಯ…
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಲಘು ಭೂಕಂಪ : ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.4ರಷ್ಟು ದಾಖಲು
ಕಲಬುರಗಿ : ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಲವಡೆ ಇಂದು ಬೆಳಗ್ಗೆ 9.48 ರ ಸುಮಾರಿಗೆ ಮತ್ತೆ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ. ಇಂದು ಬೆಳಗ್ಗೆ 9.48 ರ ಸುಮಾರಿಗೆ 5 ಸೆಕೆಂಡ್ ಗಳ ಭೂಮಿ ಕಂಪಿಸಿದ…
ಚೆಕ್ ಬೌನ್ಸ್ ಪ್ರಕರಣ :ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ
ಕಾರ್ಕಳ: ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸಿ ಕಾರ್ಕಳ ನ್ಯಾಯಾಲಯ ತೀರ್ಪು ನೀಡಿದೆ. ಕಾರ್ಕಳ ತಾಲೂಕು ಕಚೇರಿ ಬಳಿಯ ಗಂಗಾ ಬೋರ್ ವೆಲ್ಸ್ ನ ವಾಸುದೇವ ಶೆಟ್ಟಿಗಾರ್ ಅವರು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅರಳಿಮನೆ ಪ್ರಕಾಶ್ ಗೌಡ ನೀಡಿದ…
ಹಿರ್ಗಾನ:ಜ.21 ರಿಂದ 22ರವರೆಗೆ ಕುಂದೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ: ಬಹುಮುಖ ಪ್ರತಿಭೆ ಪ್ರಶಾಂತ್ ಸಿ.ಕೆ ಯವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ
ಕಾರ್ಕಳ: ಕಾರ್ಕಳ ಹಿರ್ಗಾನ ಕುಂದೇಶ್ವರ ಕ್ಷೇತ್ರದಿಂದ ಪ್ರತೀ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ರಂಗದ ಸಾಧಕ ಪ್ರಶಾಂತ್ ಸಿ.ಕೆ. ಆಯ್ಕೆಯಾಗಿದ್ದಾರೆ. ಜ.21ರಂದು ನಡೆಯುವ ಶ್ರೀ ಕುಂದೇಶ್ವರ ಜಾತ್ರೆಯ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು.…