ಕಾರ್ಕಳ: ರಬ್ಬರ್ ಸ್ಮೋಕ್ ಹೌಸ್ನಲ್ಲಿ ಅಗ್ನಿ ಅವಘಡ – ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರೆಬೈಲು ಎಂಬಲ್ಲಿ ರಬ್ಬರ್ ಸ್ಮೋಕ್ ಹೌಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆ ಮೂಲಕ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.…
ಪಿಎಂ ಉಜ್ವಲ ಯೋಜನೆ: ಎಲ್ಪಿಜಿ ಸಬ್ಸಿಡಿ ಮೊತ್ತ 300ರೂ. ಗೆ ಹೆಚ್ಚಳ
ನವದೆಹಲಿ: ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಇಂದು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ ಎಂದು ಸಂಪುಟ…
ಉಡುಪಿಯಲ್ಲಿ ಅ.10ಕ್ಕೆ ಹಿಂದೂ ಸಮಾಜೋತ್ಸವ ಹಿನ್ನಲೆ: ಅನಧಿಕೃತ ಬ್ಯಾನರ್ಗಳ ತೆರವು
ಉಡುಪಿ: ಅ.10ಕ್ಕೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದ್ದು, ಈ ಹಿನ್ನಲೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಎಲ್ಲಾ ಬ್ಯಾನರ್ ಗಳನ್ನು ತೆರವು ಮಾಡಲಾಗಿದೆ. ಶಿವಮೊಗ್ಗದ ಈದ್ಮಿಲಾದ್ ಗಲಾಟೆ ಬಿಸಿ ಇದೀಗ ಉಡುಪಿಗೂ ತಟ್ಟಿದೆ. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು,…
ಕಾರ್ಕಳ: ರೋಟರಿ ರಾಕ್ ಸಿಟಿ ವತಿಯಿಂದ ಎಸ್ಎಲ್ಆರ್ ಘಟಕ ಕಾರ್ಯಕರ್ತರಿಗೆ ಸನ್ಮಾನ
ಕಾರ್ಕಳ: ಕಾರ್ಕಳ ರೋಟರಿ ರಾಕ್ ಸಿಟಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಕಾರ್ಕಳ ತಾಲೂಕಿನ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಘಟಕದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಮುAಡ್ಕೂರು ಗ್ರಾಮ ಪಂಚಾಯತ್ ಮೇಲ್ವಿಚಾರಕಿ ಉಷಾ ಎಸ್., ಮಿಯ್ಯಾರು ಗ್ರಾಮ ಪಂಚಾಯತ್ ಮೇಲ್ವಿಚಾರಕಿ…
ಬರ ಸಮೀಕ್ಷೆ: ನಾಳೆ ರಾಜ್ಯಕ್ಕೆ ಕೇಂದ್ರದ ತಂಡ ಭೇಟಿ: 12 ಜಿಲ್ಲೆಗಳಲ್ಲಿ ಅಧ್ಯಯನ
ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಇಲ್ಲದೇ ಬರಗಾಲ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಬರ ಸಮೀಕ್ಷೆಗಾಗಿ ನಾಳೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂರು ತಂಡ ಭೇಟಿ ನೀಡಲಿದೆ. ನಾಳೆಯಿಂದ ಅ.9ರವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಹಾವೇರಿ,…
ಮೂಲ್ಕಿ :ದರೋಡೆ ಪ್ರಕರಣ ಭೇದಿಸಿದ ಪೊಲೀಸರು- 7ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಆರೋಪಿಗಳ ಬಂಧನ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು 7 ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲ್ಕಿ ಬೆಳ್ಳಾಯರು ಗ್ರಾಮದ ಕೋಲ್ನಾಡು ಚಂದ್ರಮೌಳೀಶ್ವರ ರಸ್ತೆಯ ನಿವಾಸಿ ವಸಂತಿ ಶೆಟ್ಟಿರವರ ಕುತ್ತಿಗೆಯಲ್ಲಿದ್ದ 40…
ದುರ್ಗ: ನಾಪತ್ತೆಯಾಗಿದ್ದ ಯುವಕ ಹೊಳೆಯಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ
ಕಾರ್ಕಳ:ದುರ್ಗ ಗ್ರಾಮದ ಸಂದೇಶ್ ಶೆಟ್ಟಿ ಎಂಬವರು ಕಳೆದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದು ಅವರ ಶವವು ಬುಧವಾರ ಮುಂಜಾನೆ ಕಾವೇರಡ್ಕ ಬಳಿಯ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂದೇಶ್ ಶೆಟ್ಟಿ ಕೂಲಿ ಕಾರ್ಮಿಕರಾಗಿದ್ದು,ಕಳೆದ ಶನಿವಾರದಂದು ನಾಪತ್ತೆಯಾಗಿದ್ದರು.ಇವರ ಪತ್ತೆಗೆ ಮನೆಯವರು ಹಾಗೂ ಸ್ಥಳೀಯರು…
ಕಾರ್ಕಳದ ಸಾಲ್ಮರ ಎಕ್ಸಿಸ್ ಬ್ಯಾಂಕಿನಲ್ಲಿ ಅಗ್ನಿ ಅನಾಹುತ: ಸರ್ವರ್, ಇನ್ವರ್ಟರ್ ಸೇರಿ ಹಲವು ಪರಿಕರಗಳು ಬೆಂಕಿಗಾಹುತಿ
ಕಾರ್ಕಳ: ಕಾರ್ಕಳ ನಗರದ ಸಾಲ್ಮರದಲ್ಲಿನ ಎಕ್ಸಿಸ್ ಬ್ಯಾಂಕಿನಲ್ಲಿ ಬುಧವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಬ್ಯಾಂಕ್ ಮ್ಯಾನೇಜರ್ ಮೊಬೈಲ್ ಗೆ ಸ್ವಯಂಚಾಲಿತ ಸಂದೇಶ ರವಾನೆಯಾಗಿದೆ, ಇದರಿಂದ ಎಚ್ಚೆತ್ತ ಅವರು ಕೂಡಲೇ…
ಉಗ್ರರ ತರಬೇತಿ ತಾಣವಾಗುತ್ತಿದೆಯಾ ಹುಬ್ಬಳ್ಳಿ-ಧಾರವಾಡ ಜಿಲ್ಲೆ? : ಸ್ಫೋಟಕ ಅಂಶ ಬಾಯ್ಬಿಟ್ಟ ಐಸಿಸ್ ಉಗ್ರರು
ಹುಬ್ಬಳ್ಳಿ: ದೆಹಲಿ ಪೊಲೀಸರು ಬಂಧಿಸಿರುವ ಉಗ್ರರು ವಿಚಾರಣೆ ವೇಳೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಅಲ್ಲದೆ ಬಂಧಿತ ಉಗ್ರರು ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊAದಿಗೆ ನಂಟು ಹೊಂದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಂಧಿತರು ಹುಬ್ಬಳ್ಳಿ, ಧಾರವಾಡ, ಪಶ್ಚಿಮ ಘಟ್ಟಗಳಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿದ್ದಾರೆ ಎಂದು…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:04.10.2023, ಬುಧವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಭಾದ್ರಪದ ಮಾಸ(ಕನ್ಯಾ) ಕೃಷ್ಣಪಕ್ಷ, ನಕ್ಷತ್ರ:ರೋಹಿಣಿ, ಅಮೃತ ಘಳಿಗೆ:15:14 ರಾಹುಕಾಲ 12:20 ರಿಂದ 01:50 ಗುಳಿಕಕಾಲ-10:50 ರಿಂದ 12:200 ಸೂರ್ಯೋದಯ (ಉಡುಪಿ) 06:23 ಸೂರ್ಯಾಸ್ತ – 06:18 ದಿನವಿಶೇಷ: ಚಂದ್ರಷಷ್ಠೀ ರಾಶಿ…
