ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದು, ಇದೀಗ ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಕೆ.ಎಸ್ ಆರ್ ರೈಲು ನಿಲ್ದಾಣದಲ್ಲಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದೇ ವೇಳೆ ಎರಡು ಉತ್ತರ ಭಾರತ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಬೆಂಗಳೂರು -ಬೆಳಗಾವಿ, ಅಮೃತಸರ-ಶ್ರೀ ಮಾತಾ ವೈಷ್ಣೋದೇವಿ ಕತ್ರಿ ಮತ್ತು ಅಜ್ನಿ (ನಾಗ್ಪುರ)-ಪುಣೆ ನಡುವಿನ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಇದೇ ವೇಳೆ ಚಾಲನೆ ನೀಡಿದರು.
ಮೆಟ್ರೋ ಹಳದಿ ಮಾರ್ಗವು 19 ಕಿ.ಮೀ.ಗಿಂತ ಹೆಚ್ಚು ಮಾರ್ಗದ ಉದ್ದವನ್ನು ಮತ್ತು 16 ನಿಲ್ದಾಣಗಳನ್ನು ಒಳಗೊಂಡಿದೆ. ಇದು ದಕ್ಷಿಣ-ಮಧ್ಯ ಬೆಂಗಳೂರಿನಲ್ಲಿರುವ ಆರ್‌ವಿ ರಸ್ತೆ (ರಾಗಿಗುಡ್ಡ) ಹಾಗೂ ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ. ಇದರಿಂದ ಲಕ್ಷಾಂತರ ಪ್ರಯಾಣಿಕರ ದೈನಂದಿನ ಪ್ರಯಾಣಕ್ಕೆ ತುಂಬಾ ಅನುಕೂಲಕರವಾಗಲಿದೆ.
ನಮ್ಮ ಮೆಟ್ರೋದ ಮಾರ್ಗದ ವ್ಯಾಪ್ತಿಯು 96 ಕಿ.ಮೀ. ದಾಟಲಿದೆ. ಇದು ದೆಹಲಿ ಮೆಟ್ರೋ ನಂತರ ಭಾರತದ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಿದೆ. ಆರ್‌ವಿ ರಸ್ತೆ (ರಾಗಿಗುಡ್ಡ) ದಿಂದ ಬೊಮ್ಮಸಂದ್ರವರೆಗಿನ 19 ಕಿಮೀ ಕಾರಿಡಾರ್ ಹಂತ-2 ರ ಅಡಿಯಲ್ಲಿ ದಕ್ಷಿಣ ವಲಯದ ವಸತಿ ನೆರೆಹೊರೆಗಳು, ಕೈಗಾರಿಕಾ ಕೇಂದ್ರಗಳು ಮತ್ತು ಟೆಕ್ ಪಾರ್ಕ್‌ಗಳನ್ನು ಸಂಪರ್ಕಿಸುತ್ತದೆ.
ಕಾರಿಡಾರ್ ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಮತ್ತು ಬೊಮ್ಮನಹಳ್ಳಿಯಂತಹ ಪ್ರಮುಖ ವಸತಿ ವಲಯಗಳನ್ನು ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರದಂತಹ ಕೈಗಾರಿಕಾ ಮತ್ತು ತಂತ್ರಜ್ಞಾನ ಕ್ಲಸ್ಟರ್‌ಗಳೊಂದಿಗೆ ಸಂಪರ್ಕಿಸುತ್ತದೆ. ಇದು ಮಾರ್ಗದುದ್ದಕ್ಕೂ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸಹ ಸಂಪರ್ಕಿಸುತ್ತದೆ.
ಆರ್‌ವಿ ರಸ್ತೆ (ಗ್ರೀನ್ ಲೈನ್ ಇಂಟರ್‌ಚೇಂಜ್), ರಾಗಿಗುಡ್ಡ, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ (ಪಿಂಕ್ ಲೈನ್ ಇಂಟರ್‌ಚೇಂಜ್), ಸೆಂಟ್ರಲ್ ಸಿಲ್ಕ್ ಬೋರ್ಡ್ (ಬ್ಲೂ ಲೈನ್ ಇಂಟರ್‌ಚೇಂಜ್), ಬೊಮ್ಮನಹಳ್ಳಿ, ಕುಡ್ಲು ಗೇಟ್, ಸಿಂಗಸಂದ್ರ, ಹೊಸ ರಸ್ತೆ, ಕೋಣಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಹುಸ್ಕೂರ್ ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ ಸೇರಿದಂತೆ 16 ನಿಲ್ದಾಣಗಳನ್ನು ಒಳಗೊಂಡಿದೆ.