ಕಾರ್ಕಳ: ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘ ,ಮಂಗಳೂರು ವಿಭಾಗ ಮತ್ತು ಭುವನೇಂದ್ರ ಕಾಲೇಜಿನ ಸಹಯೋಗದೊಂದಿಗೆ ಅಬ್ಬಕ್ಕ @500ಪ್ರೇರಣಾದಾಯಿ ಉಪನ್ಯಾಸಗಳ ಸರಣಿಯ ಮೂವತ್ತಾರನೇ ಕಾರ್ಯಕ್ರಮವು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕಾರ್ಕಳದ ನ್ಯಾಯವಾದಿಗಳಾದ ಸುವೃತ್ ಕುಮಾರ್ ಎಂ.ಕೆ., ರಾಣಿ ಅಬ್ಬಕ್ಕ ಸೈನ್ಯ ವ್ಯವಸ್ಥೆಯನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದ್ದರು. ಮಹಿಳೆಯಾಗಿ ಆಕೆ ಆರ್ಥಿಕತೆಯನ್ನು ,ವ್ಯಾಪಾರ ವಹಿವಾಟುಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅದು ಇವತ್ತಿಗೆ ಮಾದರಿಯಾಗಿ ಉಳಿದಿದೆ. ಆ ಕಾಲದ ಸೈನ್ಯ ವ್ಯವಸ್ಥೆಯನ್ನು ನೋಡಿದರೆ ಸರಿಯಾದ
ಪೂರ್ವಭಾವಿ ಸಿದ್ಧತೆ,ಯುದ್ಧ ತಂತ್ರಗಳನ್ನೆಲ್ಲ ಅಬ್ಬಕ್ಕ ಕಂಡುಕೊAಡಿದ್ದರು ಅನ್ನುವುದು ಇತಿಹಾಸದಿಂದ ತಿಳಿಯುತ್ತದೆ. ಇವತ್ತಿನ ವಿದ್ಯಾರ್ಥಿಗಳೆಲ್ಲ ಅದೇ ರೀತಿ ಸೈನ್ಯಕ್ಕೆ ಸೇರಿ ದೇಶಸೇವೆಯನ್ನು ಮಾಡುವ ಹಾಗೆ ಅಬ್ಬಕ್ಕನ ಸಾಧನೆ ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಅವರು,ರಾಣಿ ಅಬ್ಬಕ್ಕನಂತಹ ವೀರ ಮಹಿಳೆಯು ಆಳಿದಂತಹ ನಾಡಿನಲ್ಲಿ ನಾವು ಇರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.ಆಕೆ ಪೋರ್ಚುಗೀಸರನ್ನು ಬೆನ್ನಟ್ಟಿ ಸೋಲಿಸುವಲ್ಲಿ ವಹಿಸಿದ ಪಾತ್ರ ಇಡೀ ದೇಶಕ್ಕೇ ಮಾದರಿಯಾಗುವಂಥದ್ದು. ಆಕೆಯ ವ್ಯಾಪಾರ ನೀತಿ,ಸೈನ್ಯವನ್ನು ಸಜ್ಜುಗೊಳಿಸುತ್ತಿದ್ದ ಪ್ರಕ್ರಿಯೆ,ಯುದ್ಧದ ಕೌಶಲ ಇವೆಲ್ಲವನ್ನೂ ವಿದ್ಯಾರ್ಥಿಗಳು ಇತಿಹಾಸವನ್ನು ಓದುವ ಮೂಲಕ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಇಂತಹ ಕಾರ್ಯಕ್ರಮಗಳು ನಮ್ಮ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುವಂತೆ ಸಹಾಯವಾಗುತ್ತದೆ ಎಂದರು.
ಸAಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿಯಾದ ಅರ್ಪಿತಾ ಶೆಟ್ಟಿ ಇವರು ನಾಲ್ವರು ರಾಣಿ ಅಬ್ಬಕ್ಕಂದಿರ ಪರಿಚಯ ಮಾಡಿ,ಮೊದಲ ರಾಣಿ ಅಬ್ಬಕ್ಕಳ ಸಾಹಸಗಾಥೆಯ ಕುರಿತ ಸವಿವರ ಮಾಹಿತಿ ನೀಡಿದರು.ಇತಿಹಾಸದಲ್ಲಿ ಶಾಸನಗಳಿಂದ ಆಧಾರಿತವಾದ ಮಾಹಿತಿಯಿಂದ ಹಿಡಿದು ದಾಖಲಾಗದೇ ಉಳಿದ ವಿವರಗಳ ಕುರಿತು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮೋಹನ ಪಡಿವಾಳ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ.ಈಶ್ವರ ಭಟ್,ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಜಯಲಕ್ಷ್ಮಿಆರ್.ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವನಿತಾ ಶೆಟ್ಟಿ ಸ್ವಾಗತಿಸಿದರು,ಶ್ರೀಮತಿ ಮಮತಾ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಸುಲೋಚನಾ ಪಚ್ಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.