
ಕಾರ್ಕಳ,ಆ.03: ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸಿನ ಕಾರ್ಕಳ ಇನ್ ಹೋಟೆಲ್ ಬಳಿಯ ಸಾರ್ವಜನಿಕ ಸ್ಥಳ ಬೈಪಾಸ್ ಕ್ಯಾಂಟೀನ್ ನಲ್ಲಿ ಅಕ್ರಮ ಮಟ್ಕಾ ಜುಗಾರಿ ಆಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆ.03 ರಂದು ಮಣಿಪಾಲದ ಗುರುಪ್ರಸಾದ್, ಸಾಣೂರಿನ ರಾಜೇಶ ಹಾಗೂ ಉಡುಪಿಯ ಪ್ರಮೋದ್ ಎಂಬವರು ಸೇರಿಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಕಾರ್ಕಳ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶಿವಕುಮಾರ್ ಎಸ್ ಆರ್ ಅವರು ಸಿಬ್ಬಂದಿಯವರೊAದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಆಟಕ್ಕೆ ಬಳಸಿದ್ದ ರೂ.2630 ನಗದು ಸೇರಿದಂತೆ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
