Share this news

 

 

 

 

ಉಡುಪಿ: ನಿಖರ ಫಲಿತಾಂಶಕ್ಕೆ ಹೆಸರಾದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ಉಡುಪಿಯ ಕಲ್ಯಾಣಪುರದ ತ್ರಿಶಾ ಪದವಿಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಗುಣಮಟ್ಟ ಶಿಕ್ಷಣ ನೀಡುತ್ತಿದ್ದು, ಈ ಬಾರಿಯು ದ್ವಿತೀಯ ಪಿಯು ಫಲಿತಾಂಶದಲ್ಲಿ ತ್ರಿಶಾ ಕಾಲೇಜು ಸತತ  2ನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಕಾಲೇಜಿನ ವಿಜ್ಞಾನ ವಿಭಾಗದವಿದ್ಯಾರ್ಥಿನಿ ಅಮೃತಬಸವರಾಜ್ಬಣಕರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನಪಡೆದು ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿತಂದಿದ್ದಾರೆ. ಶ್ರೀರಕ್ಷಾ 589 ಅಂಕ,ಸುಶ್ಮಿತಾ 588 ಅಂಕ,ಆಕಾಶ್ಶೇಥಿಯಾ 586ಅಂಕ, ಶಶಾಂಕ್ ಎಸ್ ಭಟ್  585 ಅಂಕಗಳನ್ನು ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಹೊಂದಿದ್ದಾರೆ.
ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 108 ಅತ್ಯುನ್ನತ ದರ್ಜೆ ಹಾಗೂ 54 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಪಡೆದಿದ್ದಾರೆ.
ತ್ರಿಷಾ ವಿದ್ಯಾಸಂಸ್ಥೆಯು ತನ್ನ ಪ್ರಾರಂಭದ ವರ್ಷದಿಂದಲೂ ಶೇ 100ರ ಫಲಿತಾಂಶ ದಾಖಲಿಸಿದ್ದು,ಅತ್ಯುತ್ತಮ ಬೋಧಕ ಮತ್ತು ಬೋಧಕೇತರ ವೃಂದದವರೊAದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯ ಫಲಿತಾಂಶ ದಾಖಲಿಸಿರುವ ಸಂಸ್ಥೆ ಉಡುಪಿ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ.ನೀಟ್,ಜೆ.ಇ.ಇ,ಸಿ.ಇ.ಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಷ್ಟ್ರಮಟ್ಟದ ವಿವಿಧ ವೈದ್ಯಕೀಯ ಮತ್ತು ಇಂಜಿನಿಯರಿAಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡ ಹೆಗ್ಗಳಿಕೆಗೆ ತ್ರಿಶಾ ಕಾಲೇಜು ಪಾತ್ರವಾಗಿದೆ.

ವಿದ್ಯಾರ್ಥಿಗಳ ದಾಖಲೆಯ ಫಲಿತಾಂಶಕ್ಕೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು,ಉಪನ್ಯಾಸಕವರ್ಗದವರು,ಪಾಲಕ-ಪೋಷಕರು,ಬೋಧಕೇತರ ವೃಂದದವರು ಹರ್ಷವ್ಯಕ್ತಪಡಿಸಿಅಭಿನಂದನೆಸಲ್ಲಿಸಿದ್ದಾರೆ.

 

 

 

Leave a Reply

Your email address will not be published. Required fields are marked *