
.
.
.
.

ಹೆಬ್ರಿ,ಫೆ.05: ಪ್ರಯಾಣಿಕರನ್ನು ಇಳಿಸಲು ಬಸ್ಸು ನಿಲ್ಲಿಸಿದ ಸಂದರ್ಭದಲ್ಲಿ ಅತೀವೇಗವಾಗಿ ಬಂದ ಕಾರು ಬಸ್ ಹಿಂಬದಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ ಮರುಕ್ಷಣವೇ ಮತ್ತೊಂದು ಕಾರು ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಮುನಿಯಾಲು ಸಮೀಪದ ಮಾತಿಬೆಟ್ಟು ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಕಾರ್ಕಳ ಕಡೆಯಿಂದ ಹೆಬ್ರಿಗೆ ಹೋಗುತ್ತಿದ್ದ ವಿಶಾಲ್ ಮೋಟಾರ್ಸ್ ಖಾಸಗಿ ಬಸ್ ಚಾಲಕ ಮಾತಿಬೆಟ್ಟು ಎಂಬಲ್ಲಿ ಪ್ರಯಾಣಿಕರನ್ನು ಇಳಿಸಲು ಏಕಾಎಕಿ ರಸ್ತೆಯಲ್ಲೇ ಬಸ್ ನಿಲ್ಲಿಸಿದ್ದ ಪರಿಣಾಮ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಬಸ್ಸಿಗೆ ಡಿಕ್ಕಿಯಾದರೆ ಹಿಂದಿನಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಇನ್ನೋವಾ ಕಾರಿಗೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.
ಮಾರುತಿ ಡಿಸೈರ್ ಕಾರು ವರಂಗದ ಅಕ್ಷಯ್ ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದ್ದು, ಇನ್ನೋವಾ ಬಜಗೋಳಿಯ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.

.
.
.
.