Share this news

 

ಬೆಂಗಳೂರು,ಮಾ. 27: ಶಿಕ್ಷಣ ಇಲಾಖೆ SSLC ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ, SSLC ಪರೀಕ್ಷೆಗೆ ಒಟ್ಟು 525 ಅಂಕಗಳು ಮಾತ್ರ ನಿಗದಿ ಪಡಿಸಲಾಗಿದೆ. ಆ ಮೂಲಕ ತೃತೀಯ ಭಾಷೆ ಪರೀಕ್ಷೆಯ ಅಂಕಗಳನ್ನು ಅಂಕ ಪಟ್ಟಿಯಿಂದ ಹೊರಗಿಡಲಾಗಿದೆ.

ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ಇತ್ತೀಚೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ 525 ಅಂಕಗಳು ನಿಗದಿ ಮಾಡಲಾಗಿದೆ. ತೃತೀಯ ಭಾಷೆಯ ಅಂಕಕ್ಕೆ ಕೊಕ್​ ನೀಡಲಾಗಿದೆ.
ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625ರಿಂದ 525 ಇಳಿಕೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯವಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಕೆಆರ್. ವೃತ್ತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾತನಾಡಿದ್ದು, ಈ ನಿಯಮವು ಹೊಸ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಈಗ ನಮ್ಮಲ್ಲಿ‌ ಇರುವುದು ತ್ರಿಭಾಷಾ ನೀತಿ. ಎಸ್ಎಸ್ಎಲ್​​​ಸಿಯಲ್ಲಿ ಹಿಂದಿ ಭಾಷೆ ಅಂಕವನ್ನ ಗ್ರೇಡ್ ಎಂದು ಪರಿಗಣಿಸಲಾಗುವುದು. ಎಸ್ಎಸ್ಎಲ್​​ಸಿಯಲ್ಲಿ ಒಟ್ಟು ಅಂಕಗಳು 525 ಅಂತಾನೇ ಪರಿಗಣಿಸಲಾಗುತ್ತದೆ. ಫಲಿತಾಂಶದಲ್ಲಿ ಹಿಂದಿಯ ಪರೀಕ್ಷೆ ಅಂಕಗಳು ಗ್ರೇಡ್ ಅಂತಾನೇ ಇರುತ್ತೆ. ಹಿಂದಿ ಭಾಷೆಯ ಅಂಕವನ್ನ ಎ.ಬಿ.ಸಿ.ಡಿ ಅಂತ ಗ್ರೇಡ್​ನಲ್ಲಿ‌ ಕೊಡಲಾಗುವುದು. ಉಳಿದ ತರಗತಿಗಳ ಕುರಿತು ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.

2025-26ನೇ ಸಾಲಿನ ಎಸ್​​ಎಸ್​​ಎಲ್​ಸಿ ಪರೀಕ್ಷೆ ಮಾರ್ಚ್​​ 18ರಿಂದ ಆರಂಭವಾಗಿವೆ. ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಮಹಾವೀರ ಜಯಂತಿ ಹಿನ್ನೆಲೆ ಮಾ. 31ಕ್ಕೆ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಇದೆಲ್ಲದರ ಮಧ್ಯೆ ಇದೀಗ ಶಿಕ್ಷಣ ಇಲಾಖೆ ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ 525 ಅಂಕಗಳನ್ನು ನಿಗದಿ ಮಾಡಿದೆ. ಆ ಮೂಲಕ ತೃತೀಯ ಭಾಷೆಯ ಅಂಕವನ್ನು ಕೈಬಿಡಲಾಗಿದೆ.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *